Santosh Naik | Published: Feb 3, 2025, 4:15 PM IST
ಬೆಂಗಳೂರು (ಫೆ.3): ಪ್ರೀತ್ಸೆ ಪ್ರೀತ್ಸೆ ಎಂದು ಹುಡುಗಿ ಹಿಂದೆ ಬಿದ್ದ ಯುವಕನೊಬ್ಬ ಯುವತಿಯ ಮನೆ ಮಂದೆ ಬಂದು ಹೈಡ್ರಾಮಾ ಮಾಡಿದ್ದಾನೆ. ರಾಯಚೂರಿನ ಸಿಂಧನೂರಿನಲ್ಲಿ ಈ ಘಟನೆ ನಡೆದಿದೆ. ಯುವಕನ ಲವ್ ಕಾಟಕ್ಕೆ ಯುವತಿ ಊರನ್ನೇ ಬಿಟ್ಟಿದ್ದು, ಯುವಕ ಆಕೆಯ ಮನೆ ಮುಂದೆ ರಂಪಾಟ ಮಾಡಿದ್ದಾನೆ. ಹುಡುಗಿ ಅಪ್ಪನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಡಿಗ್ರಿ ವ್ಯಾಸಂಗ ಮಾಡುತ್ತಿರುವ ಯುವತಿಗೆ ವಸಂತ್ ಎನ್ನುವ ಹುಡುಗ ಕಿರುಕುಳ ನೀಡಿದ್ದಾನೆ. ಭಾನುವಾರ ಕುಡಿದು ಬಂದು ಆಕೆಯ ತಂದೆ ಸತೀಶ್ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.