Sep 4, 2020, 5:07 PM IST
ಬೆಂಗಳೂರು (ಸೆ. 04): ಡ್ರಗ್ಸ್ ವಿಚಾರದಲ್ಲಿ ಅನಿಕಾ ಎಂಬ ಹುಡುಗಿಯನ್ನು ಕಿಂಗ್ ಪಿನ್, ಕಿಂಗ್ ಪಿನ್ ಅಂತ ಹೇಳಿ ಮಾಧ್ಯಮಗಳು ಬಣ್ಣಿಸುತ್ತಿವೆ. ಕಿಂಗ್‌ಪಿನ್ ಅಲ್ಲವೇ ಅಲ್ಲ ಅವಳು. ಅವಳ ಹಿಂದೆ ಬೇಕಾದಷ್ಟು ಜನ ಇದ್ದಾರೆ. ಅವರನ್ನು ಹುಡುಕಬೇಕು. ರಾಗಿಣಿಯನ್ನು ಒದ್ದು ಒಳಗೆ ಹಾಕಬೇಕು. ವಿಚಾರಣೆ, ನೊಟೀಸ್ ಅಂತ ಯಾಕೆ ಸಮಯ ವ್ಯರ್ಥ್ಯ ಮಾಡುತ್ತೀರಿ? ಬೆಂಕಿ ಇದ್ದಾಗಲೇ ಹೊಗೆ ಬರೋದು. ನಿಮ್ಮ ಹತ್ರ ದಾಖಲೆಗಳಿರೋದಕ್ಕೆ ನೀವು ಒಳಗೆ ನುಗ್ಗಿರೋದು. ಇವರೆಲ್ಲಾ ನಟಿಯರಾ? ಎಂಥದೂ ಇಲ್ಲ. ಹಾಳು ಮಾಡೋಕೆ ಬಂದವರು. ಇವರಿಗೆ ಕಾನೂನಿನ ಭಯ ಬರಬೇಕು ಅಂದ್ರೆ ಒದ್ದು ಒಳಗೆ ಹಾಕಬೇಕು' ಎಂದು ಪ್ರಮೋದ್ ಮುತಾಲಿಕ್ ತುಮಕೂರಿನಲ್ಲಿ ಹೇಳಿದ್ದಾರೆ.
'ರಾಗಿಣಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು'; ಕೊನೆಗೂ ಬಾಯ್ಬಿಟ್ಟ ಆಪ್ತ ರವಿಶಂಕರ್..!