May 6, 2024, 11:15 AM IST
ಪ್ರಜ್ವಲ್ ರೇವಣ್ಣ (Prajwal Revanna) ಅವರು ಭಾಗಿಯಾಗಿದ್ದಾರೆ ಎನ್ನಲಾದ ಲೈಂಗಿಕ ಹಗರಣದ ವಿಡಿಯೋ ಇರುವ ಪೆನ್‌ಡ್ರೈವ್ (Pen drive) ವಿಚಾರ ಇದೀಗ ಜಾಗತಿಕವಾಗಿ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಅಪಹರಣ ಪ್ರಕರಣದ ಸಂಬಂಧ ಹೆಚ್‌ಡಿ ರೇವಣ್ಣ (HD Revanna) ಅವರನ್ನು ಬಂಧಿಸಲಾಗಿದ್ದು, ಮಗನ ಬಂಧನ ಯಾವಾಗ ಅನ್ನೋ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಅಲ್ಲದೆ ಇಂದು ಬೆಂಗಳೂರಿಗೆ ಸಂಸದ ಪ್ರಜ್ವಲ್ ರೇವಣ್ಣ ವಾಪಾಸ್ಸಾಗ್ತಾರೆ ಅನ್ನೋ ಮಾತುಗಳು ಸಹ ಕೇಳಿಬಂದಿವೆ. ಸದ್ಯದಲ್ಲೇ ಪ್ರಜ್ವಲ್ ಶರಣಾಗುತ್ತಾರೆ ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು (C.S. Puttaraju) ಹೇಳಿಕೆ ನೀಡಿದ್ದರು. ಈ ಕಾರಣಕ್ಕೆ ಪ್ರಜ್ವಲ್ ಇಂದೇ ವಾಪಸ್ ಆಗುತ್ತಾರೆ ಎನ್ನುವ ಗುಮಾನಿ ಹರಡಿದೆ.
ಇನ್ನು ಪ್ರಜ್ವಲ್ ರೇವಣ್ಣ ಮೇಲೆ ಎಸ್ಐಟಿ (SIT) ತೀವ್ರ ನಿಗಾ ಇರಿಸಿದೆ. ಈಗಾಗಲೇ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, ಭಾರತದ ಯಾವುದೇ ಏರ್ಪೋರ್ಟ್‌ಗೆ ಬಂದಿಳಿದರೂ ಸಹ ಪ್ರಜ್ವಲ್ ಲಾಕ್ ಆಗಲಿದ್ದಾರೆ. ಅದಾಗ್ಯೂ ಎರಡನೇ ಹಂತದ ಮತದಾನ ಮುಗಿಯುವವರೆಗೆ ಪ್ರಜ್ವಲ್ ವಾಪಸ್ ಆಗೋದು ಡೌಟ್ ಎಂದೂ ಸಹ ಕೆಲವು ಮೂಲಗಳಿಂದ ತಿಳಿದುಬಂದಿದೆ. ಅಂದರೆ ಮೇ.7 ರವರೆಗೂ ಪ್ರಜ್ವಲ್ ಬರುವುದಿಲ್ಲ ಎನ್ನಲಾಗಿದೆ. ಅದಾಗ್ಯೂ ಆದಷ್ಟು ಇತ್ತ ಆದಷ್ಟು ಬೇಗ ಬಂದು ಶರಣಾಗುವಂತೆ ಕುಟುಂಬಸ್ಥರೇ ಪ್ರಜ್ವಲ್‌ಗೆ ಸಲಹೆ ನೀಡುತ್ತಿದ್ದಾರೆ ಎಂದೂ ಸಹ ಮಾಹಿತಿ ತಿಳಿದುಬಂದಿದೆ.
ಇದನ್ನೂ ವೀಕ್ಷಿಸಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ: ವಿಡಿಯೋ ಕಳುಹಿಸಿ ಅಂತಿರಾ ಜೋಕೆ..ಇನ್ಮುಂದೆ ಇದು ಶಿಕ್ಷಾರ್ಹ ಅಪರಾಧ!