
ಬೆಂಗಳೂರಿಗೆ ದುಡಿಯಲು ಬಂದ ಮೂರು ಮಕ್ಕಳ ತಾಯಿಯ ಶವ ಲಾಡ್ಜ್‌ನಲ್ಲಿ ಪತ್ತೆಯಾಗುತ್ತದೆ. ಆಕೆಯ ಜೊತೆಗಿದ್ದ ಯುವಕನ ಸುಟ್ಟ ದೇಹವೂ ಸಿಕ್ಕಿದ್ದು, ಪೊಲೀಸರ ತನಿಖೆಯಿಂದ ಇದು ಪೂರ್ವನಿಯೋಜಿತ ಕೊಲೆ-ಆತ್ಮಹತ್ಯೆ ಎಂಬ ಭಯಾನಕ ಸತ್ಯ ಬಯಲಾಗಿದೆ.
ಆಕೆ ಮೂರು ಮಕ್ಕಳ ತಾಯಿ.. ಗಂಡ ಕೂಲಿ ಕೆಲಸ.. ಆದ್ರೆ ಗಂಡನ ಸಂಪಾದನೆ ಸಾಕಾಗುತ್ತಿಲ್ಲ ಅಂತ ಹೆಂಡತಿ ಬೆಂಗಳೂರಿಗೆ ದುಡಿಯಲು ಬರ್ತಾಳೆ.. ಗಂಡ ಮಕ್ಕಳು ಊರಲ್ಲೇ ಇರುತ್ತಾರೆ.. ಬೆಂಗಳೂರಿಗೆ ಬಂದವಳು ಸ್ಪಾವೊಂದರಲ್ಲಿ ಕೆಲಸಕ್ಕೆ ಸೇರಿಕೊಳ್ತಾಳೆ.. ಆದರೆ ಆವತ್ತು ಅದೇ ಮಹಿಳೆಯ ಶವ ಬೆಂಗಳೂರಿನ ಲಾಡ್ಜ್ವೊಂದರಲ್ಲಿ ಸಿಗುತ್ತೆ.. ಅದೇ ರೂಮಿನಲ್ಲಿ ಒಬ್ಬ ಯುವಕನ ಸುಟ್ಟು ಕರಕಲಾದ ಮೃತದೇಹ ಸಿಗುತ್ತೆ.