Crime News: ಮ್ಯಾಟ್ರಿಮೋನಿ ಮೋಹಪಾಶಕ್ಕೆ ಮಾಸ್ಟರ್‌ ಆಗಿದ್ದ ಮಿಸ್ಟರ್‌ ಬಕ್ರಾ!

Crime News: ಮ್ಯಾಟ್ರಿಮೋನಿ ಮೋಹಪಾಶಕ್ಕೆ ಮಾಸ್ಟರ್‌ ಆಗಿದ್ದ ಮಿಸ್ಟರ್‌ ಬಕ್ರಾ!

Published : Dec 18, 2022, 06:46 PM IST

ಮ್ಯಾಟ್ರಿಮೋನಿ ಮೋಹಪಾಶಕ್ಕೆ ಇಂಗ್ಲೀಷ್ ಶಿಕ್ಷಕ ಬಲಿ..!
ಕೇರಳದ ಚೆಲುವೆಗೆ ಲಕ್ಷ ಲಕ್ಷ ಸುರಿದ ಹಳ್ಳಿಮೇಷ್ಟ್ರು..!
ಮೋಸಗಾತಿ ಸಂಗ, ಮದುವೆ ಕನಸು ಭಂಗ..!
ಸೈಬರ್ ಕ್ರೈಂ ಹಾವಳಿಗೆ ತತ್ತರಿಸಿ ಹೋದ ಸಂಡೂರು ಶಿಕ್ಷಕ..!

ಬೆಂಗಳೂರು (ಡಿ.18): ಅವನೊಬ್ಬ ವಿಚ್ಛೇಧಿತ ಇಂಗ್ಲೀಷ್ ಶಿಕ್ಷಕ. ಮೊದಲ ಹೆಂಡ್ತಿ ಬಿಟ್ಟು ಹೋದ್ಮೇಲೆ ತಾನಾಯ್ತು ತನ್ನ ಪಾಡಾಯ್ತು ಅಂತಿದ್ದವನು. ಅಂಥವನ ತಲೆ ಕೆಡಿಸಿದ ಅವಳೊಬ್ಬಳು ಮಿಲ್ಕ್ ಬ್ಯೂಟಿ. ಕಡೆಗೆ ಆ ಇಂಗ್ಲೀಷ್ ಮೇಸ್ಟ್ರ ಹೃದಯ ಕದ್ದಿದ್ಲು. ಆನ್ಲೈನ್ನಲ್ಲಿ ಶುರುವಾದ ಅವರಿಬ್ಬರ ಲವ್ವು ಯಶಸ್ವಿ 100 ದಿನ ಕಳೆಯೋ ಹೊತ್ತಿಗೆ ಮಾಸ್ಟರ್‌ ಮಿಸ್ಟರ್‌ ಬಕ್ರಾ ಆಗಿದ್ದಾನೆ.

ಕೇರಳದ ಚೆಲುವೆ ಹಾಗೂ ಸಂಡೂರಿನ ಹುಲಿಯ ಲವ್ ಸ್ಟೋರಿ ಏನೋ ಶುರು ಆಗಿಬಿಡುತ್ತೆ. ಮೊದಲೇ ಇಂಗ್ಲೀಷ್ ಟೀಚರ್ ಆಗಿದ್ದ ದೇವೇಂದ್ರಪ್ಪ ಹರಳು ಹುರಿದಂತೆ ಇಂಗ್ಲೀಷ್ ಬೇರೆ ಮಾತಾಡ್ತಾನೆ. ಈ ಇಬ್ರಿಗೂ ಕಮ್ಯುನಿಕೇಷನ್ ಗೆ ಯಾವುದೇ ಸಮಸ್ಯೆ ಆಗಿರ್ಲಿಲ್ಲ. ಆದರೆ, ಅಸಲಿ ಕಥೆ ಶುರು ಬೇರೇನೇ ಇದೆ. ಶಿಕ್ಷಕ ನೀನೇ ನನ್ನ ಜೀವದ ಗೆಳತಿ ಎಂದು ಹರಿತಾಗೆ ಮೆಸೇಜ್ ಮಾಡ್ತಾನೆ ಇದ್ದನು. ಆದರೆ, ಈ ಕಿಲಾಡಿ ಕೇರಳದ ಹರಿತಾ ಈ ಮೇಷ್ಟ್ರನ್ನು ಲವ್ವೆ ಮಾಡಿರ್ಲಿಲ್ಲ. ಪ್ರೀತ್ಸೆ ಪ್ರೀತ್ಸೆ ಅಂತಿದ್ದವನ ಬಾಳಲ್ಲಿ ಆಗಿದ್ದೇ ಬೇರೆ. ಅಲ್ಲಿ ನಡೆದಿದ್ದು ಅದೆಂಥಾ ಮೋಸ ಅಂತೀರಾ? ಅಸಲಿಗೆ ಯಾರೇ ನೀನು ಚೆಲುವೆ ಅಂದವನು ಮಿಸ್ಟರ್ ಬಕ್ರಾ ಆಗಿದ್ದು ಒಂದು ರೋಚಕ ಕಥೆಯಾಗಿದೆ. 

Mandya: ಶಿಕ್ಷಕನಿಂದ ಲೈಂಗಿಕ ಕಿರುಕುಳ, ಬೇಸತ್ತ ವಿದ್ಯಾರ್ಥಿನಿಯರಿಂದ ಧರ್ಮದೇಟು

ಶಿಕ್ಷಕ ಮತ್ತು ಮ್ಯಾಟ್ರಿಮೊನಿ ಸುಂದರಿ ಹರಿತಾ ನಡುವೆ ವಾಟ್ಸ್ ಆ್ಯಪ್ ನಂಬರ್‌ಗಳೂ ಪರಸ್ಪರ ವರ್ಗಾವಣೆ ಆಗಿವೆ. ರಾತ್ರೊ ರಾತ್ರಿ ಫೋನ್ ಕಾಲ್‌ಗಳ ಸುರಿಮಳೆ ಕೂಡ ಶುರು ಆಗಿಬಿಟ್ಟಿತ್ತು. ಹಂತ ಹಂತವಾಗಿ ಆಕೆ ಹಣವನ್ನು ಪೀಕುತ್ತಾ ಬಂದರೂ ಕೂಡ ಮೇಷ್ಟ್ರಿಗೆ ಗೊತ್ತೆ ಆಗಿರಲಿಲ್ಲ. ಸರಿ ಸುಮಾರು ಎರಡೂವರೆ ವರ್ಷ ನಿರಂತರವಾಗಿ ಫೋನು ಮೆಸೇಜು ಮಾಡ್ಕೊಂಡು ಇಬ್ಬರೂ ಆರಾಮಾಗಿದ್ದಾರೆ. ಆದರೆ, ಹರಿತಾ ಎರಡೂವರೆ ವರ್ಷ ಆದ್ಮೇಲೆ ತನ್ನ ಅಸಲಿ ಆಟ ಶುರು ಮಾಡಿದ್ದಳು.

ಹೆಂಡ್ತಿ ಬಿಟ್ಟು ಹೋದ ಈತನಿಗೆ ಯಾರೂ ಇರಲಿಲ್ಲ. ಸಂಡೂರಿನಲ್ಲಿ ಒಬ್ಬನೇ ಇದ್ದಾನೆ. ಬದುಕಿನ ಬಗ್ಗೆ ಭವಿಷ್ಯದ ಬಗ್ಗೆ ವೈವಾಹಿಕ ಜೀವನದ ಬಗ್ಗೆ ಹಲವು ಕನಸುಕಂಡಿದ್ದ ಈತನ ಬದುಕು ಸದ್ಯ ಗಾಳಿ ತೆಗೆದ ಬಲೂನಂತಾಗಿದೆ. ಈ ಬಗ್ಗೆ ಪೂರ್ಣ ವಿವರನ್ನು ವೀಡಿಯೋದಲ್ಲಿ ನೀವೇ ನೋಡಿ..

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!