ತಾನು ಇಷ್ಟಪಟ್ಟಿದ್ದ ಯುವತಿಯ ಮದುವೆಗೆ ಆಕೆಯ ಮನೆಯವರು ಒಪ್ಪದ್ದಕ್ಕೆ ವಿವಾಹಿತ ಪಾಗಲ್ ಪ್ರೇಮಿಯೋರ್ವ ಮನೆಗೆ ನುಗ್ಗಿ ಅವಳ ರುಂಡ ಕಡಿದು ಪೊಲೀಸ್ ಠಾಣೆಗೆ ತಂದು ಶರಣಾದ ಘಟನೆ ವಿಜಯ ನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಸಮೀಪದ ಕನ್ನಿಬೊರಯ್ಯನಹಟ್ಟಿಯಲ್ಲಿ ನಡೆದಿದೆ.

ಕನ್ನಿಬೋರಯ್ಯನ ಹಟ್ಟಿ ಗ್ರಾಮದ ಚೇರ್ಮನ್ ಬಸಣ್ಣ ಪುತ್ರಿ ನಿರ್ಮಲಾ(23) ಕೊಲೆಯಾದವಳು. ಅದೇ ಗ್ರಾಮದ ಭೋಜರಾಜ ಕೊಲೆಗಾರ. ಇವರು ಸಂಬಂಧಿಕರೂ ಆಗಿದ್ದರು. ಯುವತಿ ಬಿಎಸ್‌ಸಿ ನರ್ಸಿಂಗ್ ಕೊನೆಯ ವರ್ಷ ಓದುತ್ತಿದ್ದಳು. ಭೋಜರಾಜ ಅವರದ್ದೇ ಟ್ರ್ಯಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. 2-3 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇವರ ಮದುವೆಗೆ ಯುವತಿ ಮನೆಯವರು ಒಪ್ಪಿರಲಿಲ್ಲ. ಹೀಗಾಗಿ ಎರಡು ತಿಂಗಳ ಹಿಂದಷ್ಟೇ ಆತ ಬೇರೊಬ್ಬಳೊಂದಿಗೆ ವಿವಾಹವಾಗಿದ್ದ. ನಿರ್ಮಲಾ 3 ದಿನದ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದಳು. ನಿರ್ಮಲಾ ಪೋಷಕರು ಕೆಲಸಕ್ಕೆ ತೆರಳಿದ್ದರು. ಬೆಳಗ್ಗೆ 11.30ಕ್ಕೆ ಲಾಂಗ್ ಹಿಡಿದುಕೊಂಡು ಮನೆಗೆ ನುಗ್ಗಿದ ಭೋಜರಾಜ, ನಿರ್ಮಲಾಳ ರುಂಡ ಕಡಿದು, ಅದನ್ನು ಬೈಕ್ ಮೇಲಿಸಿ 10 ಕಿ.ಮೀ. ದೂರದ ಹೊಸಹಳ್ಳಿ ಠಾಣೆಗೆ ತಂದು, ಪೊಲೀಸರಿಗೆ ಶರಣಾಗಿದ್ದಾನೆ.