ಡ್ರಗ್ ಮಾಫಿಯಾ ಕಿಂಗ್‌ಪಿನ್‌ ಶೇಖ್‌ನನ್ನು ಹಿಡಿಯಲು ಸಿಸಿಬಿ ಮಾಸ್ಟರ್ ಪ್ಲಾನ್

Sep 18, 2020, 4:37 PM IST

ಬೆಂಗಳೂರು (ಸೆ. 18): ಸ್ಯಾಂಡಲ್‌ವುಡ್ ಡ್ರಗ್ ಕಿಂಗ್‌ಪಿನ್ ಶೇಖ್ ಫಾಸಿಲ್‌ಗೆ ಸಿಸಿಬಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ನಟಿ ಮಣಿಯರು ಅರೆಸ್ಟ್ ಆಗಿದ್ದೇ ತಡ, ಫಾಸಿಲ್ ನಾಪತ್ತೆಯಾಗಿದ್ದಾನೆ. 

ಡ್ರಗ್ಸ್ ಘಾಟು; ನಿರೂಪಕ ಅಕುಲ್ ಬಾಲಾಜಿ ಜತೆ ಪ್ರಭಾವಿ 'ಕೈ' ನಾಯಕನ ಪುತ್ರನಿಗೂ ನೋಟಿಸ್

ಈತನಿಗೆ ಸಿಸಿಬಿ ಬೇರೆ ರಾಜ್ಯಗಳಲ್ಲೂ ಹುಡುಕಾಟ ನಡೆಸುತ್ತಿದೆ. ಹಲವು ತಂಡಗಳನ್ನು ಮಾಡಿ ಹುಡುಕಾಟ ನಡೆಸಲಾಗುತ್ತಿದೆ. ಈತನನ್ನು ಅರೆಸ್ಟ್ ಮಾಡಿದರೆ ಅನೇಕ ರಾಜಕಾರಣಿಗಳ ಹೆಸರು ಹೊರ ಬರುತ್ತದೆ. ಡ್ರಗ್ ಜಾಲದ ಮೂಲದವರೆಗೆ ಹೋಗಬೇಕು ಅಂದರೆ ಈತನನ್ನು ಅರೆಸ್ಟ್ ಮಾಡಲೇಬೇಕು. ಹಾಗಾಗಿ ಸಿಸಿಬಿ ಸಖತ್ ಪ್ಲಾನ್ ಮಾಡಿದೆ.