ಮಂಗಳೂರಿನ ಎಮ್ಮೆಕೆರೆಯಲ್ಲಿ ಗುರುವಾರ ತಂಡವೊಂದು ರೌಡಿಶೀಟರ್ ಕಕ್ಕೆ ರಾಹುಲ್ (26) ಎಂಬಾತನ ಮರ್ಡರ್ ನಡೆದಿದೆ. ರೌಡಿ ಶೀಟರ್ ಆಗಿದ್ದ ಹೊಯ್ಗೆ ಬಜಾರ್ ನಿವಾಸಿ ರಾಹುಲ್ (26) ಕೊಲೆಯಾದ ವ್ಯಕ್ತಿ .
ಮಂಗಳೂರು (ಮೇ.01): ನಗರದ ಎಮ್ಮೆಕೆರೆಯಲ್ಲಿ ಗುರುವಾರ ತಂಡವೊಂದು ರೌಡಿಶೀಟರ್ ಕಕ್ಕೆ ರಾಹುಲ್ (26) ಎಂಬಾತನ ಮರ್ಡರ್ ನಡೆದಿದೆ. ರೌಡಿ ಶೀಟರ್ ಆಗಿದ್ದ ಹೊಯ್ಗೆ ಬಜಾರ್ ನಿವಾಸಿ ರಾಹುಲ್ (26) ಕೊಲೆಯಾದ ವ್ಯಕ್ತಿ ಎಮ್ಮೆಕೆರೆ ಮೈದಾನದಲ್ಲಿ ಕೋಳಿ ಅಂಕ ನಡೆಯುತ್ತಿತ್ತು. ಅಲ್ಲಿಗೆ ಬಂದಿದ್ದ ರಾಹುಲ್‌ನನ್ನು ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಹಿಡಿದು ಅಟ್ಟಾಡಿಸಿಕೊಂಡು ಮೈದಾನದ ನಡುವೆ ಯದ್ವಾತದ್ವಾ ಇರಿದು ಪರಾರಿಯಾಗಿದ್ದಾರೆ. ಸ್ಥಳೀಯರು ಕೂಡಲೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ರಾಹುಲ್ ಮೃತಪಟ್ಟಿದ್ದಾನೆ.
ಎಮ್ಮೆಕೆರೆಯ ರೌಡಿ ತಂಡದ ಜತೆಗಿನ ರಾಹುಲ್ ವೈಷಮ್ಯವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ರಾಹುಲ್ ಇನ್ನೊಂದು ರೌಡಿ ತಂಡದ ಜತೆ ಗುರುತಿಸಿಕೊಂಡಿದ್ದು, ಈ ಹಿಂದೆ ಎಮ್ಮೆಕೆರೆಯ ರೌಡಿ ತಂಡದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಇದೇ ದ್ವೇಷದಿಂದ ರಾಹುಲ್‌ನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.