Dec 19, 2020, 9:50 AM IST
ಬೆಂಗಳೂರು (ಡಿ. 19): ಮಂಗಳೂರಿನ ಉಜಿರೆಯಲ್ಲಿ ನಡೆದ ಬಾಲಕನ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಅಪ್‌ಡೇಟ್ಸ್ ಸಿಗುತ್ತಿದೆ. ಕೋಲಾರದಲ್ಲಿ ಒಟ್ಟು ಆರು ಮಂದಿ ಕಿಡ್ನಾಪರ್ಸ್‌ಗಳು ಅರೆಸ್ಟ್ ಆಗಿದ್ದಾರೆ. ಬಾಲಕ ಅನುಭವ್ ಸುರಕ್ಷಿತನಾಗಿದ್ದಾನೆ.
ಕೈ ಮುಗಿದು ಪ್ರಧಾನಿ ಮೋದಿ ಹೇಳಿದ 10 ಅಂಶಗಳೇನು; ರೈತರ ಪ್ರತಿಭಟನೆಗೆ ಸಿಗುತ್ತಾ ತಿರುವು?
ಉಜಿರೆಯ ರಥಬೀದಿಯಿಂದ ಮೊನ್ನೆಯಷ್ಟೇ ಉದ್ಯಮಿ ಬಿಜೋಯ್ ಪುತ್ರ ಅನುಭವ್ ಕಿಡ್ನಾಪ್ ಆಗಿದ್ದ. ಮೊದಲು 17 ಕೋಟಿ, ನಂತರ 10 ಕೋಟಿ ಆಮೇಲೆ 25 ಲಕ್ಷಕ್ಕೆ ಕಿಡ್ನಾಪರ್ಸ್‌ಗಳು ಬೇಡಿಕೆ ಇಟ್ಟಿದ್ದರು. ಮಂಗಳೂರು ಪೊಲೀಸರು ವಿಶೇಷ ತಂಡವನ್ನು ರಚಿಸಿ, ಕಾರ್ಯಾಚರಣೆಗಿಳಿದಿದ್ದರು. ಇವರಿಗೆ ಕೋಲಾರ ಎಸ್‌ಪಿ ಕಾರ್ತೀಕ್ ರೆಡ್ಡಿ ಸಾಥ್ ನೀಡಿದ್ದರು.