Nov 21, 2022, 4:03 PM IST
ಮಂಗಳೂರು: ಮಂಗಳೂರು ಆಟೋ ಸ್ಫೋಟ ಪ್ರಕರಣದ ಆರೋಪಿ ಮೊಹಮದ್ ಶಾರೀಕ್'ಗೂ ಹಾಗೂ ಕೊಯಮುತ್ತೂರು ಬ್ಲಾಸ್ಟ್'ಗೂ ಲಿಂಕ್ ಇದೆಯಾ ಎನ್ನುವ ಶಂಕೆ ಉಂಟಾಗಿದೆ. ಬ್ಲಾಸ್ಟ್'ಗೂ ಮುನ್ನ ಶಾರೀಕ್ ತಮಿಳುನಾಡಿಗೆ ಭೇಟಿ ನೀಡಿದ್ದ, ಹಾಗೂ ತಮಿಳುನಾಡಿನ ಶಿಕ್ಷಕನೊಬ್ಬನ ಹೆಸರಿನಲ್ಲಿ ಸಿಮ್ ಪಡೆದಿದ್ದ. ಸೆಪ್ಟೆಂಬರ್'ನಲ್ಲಿ ಕೊಯಮುತ್ತೂರಿನ ಸಿಂಗನಲ್ಲೂರಿಗೆ ಶಾರೀಕ್ ಭೇಟಿ ನೀಡಿದ್ದ. ಕಾರು ಬಾಂಬ್ ಸ್ಫೋಟಕ್ಕೂ ಮೊದಲೇ ಅಲ್ಲಿಗೆ ಹೋಗಿದ್ದ. ಅ. 23ರಂದು ಸಂಗಮೇಶ್ವರ ದೇವಸ್ಥಾನದ ಎದುರು ಸ್ಫೋಟವಾಗಿ, ಜಗಮೇಶ್ ಮುಬೀನ್ ಎಂಬ ಐಸಿಸ್ ನಂಟಿದ್ದ ಉಗ್ರ ಸಾವನಪ್ಪಿದ್ದ. ಬೆಂಗಳೂರಲ್ಲಿ ಮೆಕಾನಿಕಲ್ ಎಂಜನೀಯರ್ ಮುಬೀನ್ ನಂಟು ಕೂಡ ಇದ್ದು, ಸಿಂಗನಲ್ಲೂರಿನಲ್ಲೇ ಇದ್ದು ಕೊಂಡೇ ಬಾಂಬ್ ಬ್ಲಾಸ್ಟ್‌ಗೆ ಪ್ಲಾನ್ ಮಾಡಲಾಗಿತ್ತು. ಸೆಪ್ಟೆಂಬರ್'ನಲ್ಲಿ ತೀರ್ಥಳ್ಳಿಯಿಂದ ಪಾರೀಖ್ ನಾಪತ್ತೆಯಾಗಿದ್ದ.