ಮಂಗಳೂರು ಬ್ಲಾಸ್ಟ್ ಪ್ರಕರಣ: ಉಗ್ರ ಕೃತ್ಯಕ್ಕೆ 'ಕೇಸರಿ ಬಣ್ಣ' ಬಳಿಯಲು ನಡೆದಿತ್ತಾ ಸಂಚು

Nov 21, 2022, 11:54 AM IST

Mangaluru:ಮಂಗಳೂರಿನ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಪೋಟಕ್ಕೆ ಸಂಬಂಧಿಸಿದಂತೆ, ಇದೀಗ ಭಾರೀ ಟ್ವಿಸ್ಟ್ ಸಿಕ್ಕಿದ್ದು ಸ್ಫೋಟ ನಡೆಸಿ ಹಿಂದೂಗಳ ತಲೆಮೇಲೆ ಕಟ್ಟುವ ಪ್ರಯತ್ನ ನಡೆಯಿತಾ ಎಂಬ ಪ್ರಶ್ನೆ ಮೂಡಿದೆ. ಸೊಂಟಕ್ಕೆ ಕೇಸರಿ ಬಣ್ಣದ ಬಟ್ಟೆ ಕಟ್ಟಿಕೊಂಡೇ ಬಂದಿದ್ದ ಶಂಕಿತ ಉಗ್ರ. ನಾಗುರಿ ಬಳಿ ರಸ್ತೆಯಲ್ಲಿ ಸುತ್ತಾಡಿದಾಗಲೂ ಸೊಂಟದಲ್ಲಿತ್ತು ಕೇಸರಿ ಬಟ್ಟೆ. ಆಧಾರ್‌ ದಾಖಲೆಯಲ್ಲೂ ಪ್ರೇಮ್‌ ರಾಜ್‌ ಹೆಸರು ನಕಲಿ ಮಾಡಿದ್ದ ಶಂಕಿತ, ಹಿಂದೂ ಎಂದೂ ತೋರಿಸಿಕೊಳ್ಳಲು ಕೇಸರಿ ಶಾಲು ನಕಲಿ ಆಧಾರ್‌ ಬಳಕೆ ಮಾಡಿದ್ದಾನೆ. ಇಡೀ ಬಾಂಬ್‌ ಬ್ಲಾಸ್ಟ್‌ ಹಿಂದೂಗಳ ತಲೆಗೆ ಕಟ್ಟಲು ಮೆಗಾ ಪ್ಲಾನ್‌ ನಡೆದಿದ್ದು, ಹಿಂದೂಗಳಿಗೆ ಸಂಬಂಧಿಸಿದ ಜಾಗಗಳಲ್ಲೇ ಆತ್ಮಾಹುತಿ ದಾಳಿ ಸಂಚಿನ ಶಂಕೆ ವ್ಯಕ್ತವಾಗಿದೆ.

Mangaluru: ಕುಕ್ಕರ್‌ ಬಾಂಬ್‌ ಸ್ಫೋಟಿಸಿದ್ದು ಗೋಡೆ ಬರಹದ ಆರೋಪಿ ಶಾರೀಕ್‌?