Nov 22, 2022, 12:47 PM IST
ಮಂಗಳೂರು: ಮಂಗಳೂರು ಬ್ಲಾಸ್ಟ್ ಪ್ರಕರಣದ ಭಯಾನಕ ದೃಶ್ಯ ಲಭ್ಯವಾಗಿದ್ದು, ಕರಾವಳಿ ಕೆಂಗೆಡಿಸಲು ಟ್ರಯಲ್ ಬ್ಲಾಸ್ಟ್ ಪ್ಲಾನ್ ಮಾಡಿದ್ರಾ ಎಂಬ ಶಂಕೆ ವ್ಯಕ್ತವಾಗಿದೆ. 16 ಸೆಕೆಂಡ್ ಮೊದಲು ಬ್ಲಾಸ್ಟ್ ಆಗಿದ್ರೆ ಭಾರೀ ಅಪಾಯ ಕಾದಿತ್ತು. ಆಟೋದಲ್ಲಿದ್ದ ಕುಕ್ಕರ್, ಆಯಿಲ್ ಟ್ಯಾಂಕರ್ ಹೋದ ಕೇವಲ 16 ಸೆಕೆಂಡ್‌ಗೆ ಬ್ಲಾಸ್ಟ್ ಆಗಿದೆ. ಆಯಿಲ್ ಟ್ಯಾಂಕರ್ ಆಟೋದ ಕೆಲವೇ ಮೀಟರ್ ಅಂತರದಲ್ಲಿ ಸಂಚರಿಸಿತ್ತು. ಸ್ಫೋಟಕ್ಕೂ ಮೊದಲು ಸಾಲು-ಸಾಲು ವಾಹನಗಳು ಸಂಚರಿಸುತ್ತಿದ್ದವು. ಕುಕ್ಕರ್ ಸ್ಫೋಟದಿಂದ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿಕೊಂಡಿತ್ತು. ಆಟೋದಿಂದ ಇಳಿದು ಚಾಲಕ ಪುರುಷೋತ್ತಮ, ಶಾರೀಕ್ ಓಡಿದ್ದಾರೆ. ಈ ಎಲ್ಲಾ ದೃಶ್ಯ ಸೆರೆಯಾಗಿದೆ.
Mangaluru Bomb Blast:ಅಧರ್ಮದಲ್ಲಿ ಬಂದವರಿಗೆ ಶಿಕ್ಷೆ ನೀಡಿದ ತುಳುನಾಡಿನ ಕಾರ್ಣಿಕ ಅವಳಿ ಪುರುಷರು!