ಬೆಳಗಾವಿ: ಇನ್ಶ್ಯೂರೆನ್ಸ್​​ ಹಣಕ್ಕೆ ಅಣ್ಣನಿಗೇ ಮೂಹುರ್ತ ಇಟ್ಟ ತಮ್ಮ!

Dec 6, 2024, 11:50 AM IST

ಬೆಳಗಾವಿ(ಡಿ.06):  ಅದೊಂದು ತುಂಬು ಕುಟುಂಬ. ಅಪ್ಪ ಅಮ್ಮ ಇಬ್ಬರು ಮಕ್ಕಳು ಮತ್ತು ಅವರ ಹೆಂಡತಿ ಮಕ್ಕಳು.  ಎಲ್ಲರೂ ಒಂದೇ ಮನೆಯಲ್ಲಿ ಜೇನುಗೂಡಿನಂತಿದ್ರು. ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬ ಅದು. ಆದ್ರೆ ಆವತ್ತು ಇದ್ದಕ್ಕಿದ್ದಂತೆ ಮೊದಲ ಮಗ ಕಾಣೆಯಾಗಿಬಿಟ್ಟ.ಎಲ್ಲಿ ಹುಡುಕಿದ್ರೂ ಸಿಗೋದಿಲ್ಲ. ನಂತರ ಪೊಲೀಸರಿಗೂ ವಿಷಯ ಮುಟ್ಟಿತ್ತು. ಕೆಲಸದ ಮೇಲೆ ಹೋಗಿರಬೇಕು ಬರ್ತಾನೆ ಅಂತ ಎಲ್ರೂ ಅಂದುಕೊಂಡಿದ್ರು. ಆದ್ರೆ ಆತ ಕಾಣೆಯಾಗಿ 7ನೇ ದಿನಕ್ಕೆ ಆತನ ಮೃತದೇಹ ಸಿಕ್ಕಿತ್ತು. ಅವನನ್ನ ಬರ್ಬರವಾಗಿ ಕೊಂದು ಗದ್ದೆಯಲ್ಲಿ ಬಿಸಾಡಿದ್ರು ಹಂತಕರು.

ಇನ್ನೂ ಕೊಲೆ ಕೇಸ್​​ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನ ಆರಂಭಿಸಿದ್ರು. ಆದ್ರೆ ಒಂದು ತಿಂಗಳಾದ್ರೂ ಹಂತಕರ ಸುಳಿವು ಸಿಕ್ಕಿರಲಿಲ್ಲ. ಆದ್ರೆ ಒಂದು ತಿಂಗಳ ನಂತರ ಕೊಲೆಗಾರರೇ ಬಿಟ್ಟಿದ್ದ ಒಂದು ಸುಳಿವು ಪೊಲೀಸರಿಗೆ ನೆರವಾಗಿತ್ತು. ಅಷ್ಟಕ್ಕೂ ಆತನನ್ನ ಕೊಲೆ ಮಾಡಿದ್ಯಾರು? ಯಾಕಾಗಿ ಕೊಲೆ ಮಾಡಿದ್ರು. ಒಂದು ಮರ್ಡರ್​​ ಕೇಸ್​​ನ ಕಂಪ್ಲೀಟ್​​ ಕಹನಿ ಇವತ್ತಿನ ಎಫ್​.ಐ.ಆರ್​​.

ಒಳ್ಳೆ ಹುಡುಗ. ಇಡೀ ಗ್ರಾಮದಲ್ಲಿ ಒಳ್ಳೆ ಹೆಸರು ಸಂಪಾದಿಸಿದ್ದ. ಆದ್ರೂ ಅವನನ್ನ ಹಂತಕರು ಕೊಲೆ ಮಾಡಿಬಿಟ್ಟಿದ್ರು.. ಪೊಲೀಸರಿಗೆ ಒಂದೇ ಒಂದು ಸುಳಿವು ಸಿಗೋದಿಲ್ಲ. ಹೀಗೆ ಒಂದುವರೆ ತಿಂಗಳು ಕಳೆದೇ ಹೋಗಿಬಿಡುತ್ತೆ.. ಪರಿಸ್ಥಿತಿ ಹೀಗಿರುವಾಗ್ಲೇ ಹಂತಕರೇ ಪೊಲೀಸರಿಗೆ ಒಂದು ಕ್ಲೂ ಕೊಟ್ಟುಬಿಡ್ತಾರೆ. ಅದೇ ಕ್ಲೂ ಇವತ್ತು ಹಂತಕರನ್ನ ಜೈಲಿಗೆ ಕಳಿಸಿದೆ.

ಹಣದ ಮುಂದೆ ಸಂಬಂಧಗಳಿಗೆ ಬೆಲೆ ಇಲ್ಲ ಅನ್ನೋದು ಈ ಸ್ಟೋರಿ ಪ್ರೂವ್​ ಮಾಡಿದೆ.  ಒಬ್ಬ ಮಗ ಜೈಲು ಪಾಲಾದ್ರೆ, ಇನ್ನೊಬ್ಬ ಮೃತಪಟ್ಟಿದ್ದು, ಆ ಮನೆ ಈಗ ಗಂಡು ದಿಕ್ಕಿಲ್ಲದ ಮನೆಯಾಗಿದೆ.. ಈಗ ಒಂದು ಬ್ರೇಕ್​​... ಬ್ರೇಕ್​ ಆದ್ಮೇಲೆ ತಮ್ಮ ಪ್ರೀತಿಯನ್ನ ಒಪ್ಪದಿದ್ದಕ್ಕೆ ಪ್ರೇಯಸಿಯ ತಾಯಿ ಮತ್ತು ಸಹೋದರನನ್ನೇ ಕೊಂದ ಹುಚ್ಚು ಪ್ರೇಮಿಯ ಕಥೆ ಹೇಳ್ತೀವಿ.

ಕೊರೋನ ಸಮಯದಲ್ಲಿ ಮನೆ ಯಜಮಾನ ತೀರಿ ಹೋಗ್ತಾನೆ, ಇಬ್ಬರು ಮಕ್ಕಳನ್ನ ಕಟ್ಟಿಕೊಂಡು ತಾಯಿ ಜೀವನ ನಡೆಸುತ್ತಿರುತ್ತಾಳೆ. ಗಂಡು ದಿಕ್ಕಿಲ್ಲದ ಮನೆಗೆ ಅವನೊಬ್ಬ ಸಹಾಯ ಮಾಡುವ ನೆಪದಲ್ಲಿ ಎಂಟ್ರಿಯಾಗ್ತಾನೆ. ಹೀಗೆ ಬಂದ ಪಾಪಿ ಇಡೀ ಮನೆಯನ್ನೇ ಸರ್ವನಾಶ ಮಾಡಿದ್ದಾನೆ, ತಾಯಿ ಮಗನನ್ನ ಕೊಂದು ರಣಕೇಕೆ ಹಾಕಿದ್ದಾನೆ. 

ಪ್ರೀತಿಗಾಗಿ ಇಲ್ಲಿ ಎರಡು ಜೀವ ಹೋಗಿದ್ರೇ ತಿಳಿಯದ ವಯಸ್ಸಲ್ಲಿ ಪ್ರೀತಿ ಅಂತಾ ಹೋದಾಕೆ ಇದೀಗ ಅವನು ಇಲ್ಲ, ಅಮ್ಮ-ತಮ್ಮನೂ ಇಲ್ಲದೇ ಬೀದಿಗೆ ಬಂದಿದ್ದಾಳೆ.