Oct 8, 2022, 11:04 AM IST
ಬೆಂಗಳೂರು (ಅ.08): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒನ್ ಸೈಡ್ ಪ್ರೀತಿಯ ಪ್ರೇಮಿಯೊಬ್ಬ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ತಾನು ಪ್ರೀತಿಸುತ್ತಿದ್ದ ಯುವತಿಯ ಪ್ರಿಯಕರನನ್ನು ಹಲ್ಲೆ ಮಾಡಲು ಹೋಗಿ ರಸ್ತೆಯಲ್ಲಿ ಸಿಕ್ಕ ಅಪರಿಚಿತನಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಮಾಗಡಿರೋಡ್ ಬಳಿ ಮಂಜೇಶ್ ಹಾಗೂ ಆತನ ಗ್ಯಾಂಗ್ ಹುಚ್ಚಾಟಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿ ಆಸ್ಪತ್ರೆ ಸೇರುವಂತಾಗಿದೆ. ನಡುರಸ್ತೆಯಲ್ಲಿ ಭೀಕರವಾಗಿ ಹಲ್ಲೆ ನಡೆದಿದ್ದು ಸಿಸಿಟಿವಿಯಲ್ಲಿ ಘಟನೆ ದೃಶ್ಯ ಸೆರೆಯಾಗಿದೆ. ಹಲ್ಲೆ ಮಾಡಿದ ಮಂಜೇಶ್‌ಗೆ ಯುವತಿಯೋರ್ವಳ ಮೇಲೆ ಪ್ರೀತಿಯಾಗಿತ್ತು. ಆದ್ರೆ ಆ ಯುವತಿಗೆ ನಿತೀನ್ ಎಂಬಾತನ ಮೇಲೆ ಪ್ರೀತಿಯಾಗಿತ್ತು. ಹೀಗಾಗಿ ತಾನು ಇಷ್ಟ ಪಟ್ಟ ಯುವತಿಯ ಪ್ರಿಯಕರನ ಮೇಲೆ ಕೋಪಗೊಂಡಿದ್ದ ಮಂಜೇಶ್, ಆತನನ್ನು ಮಾತನಾಡಿಸುವ ನೆಪದಲ್ಲಿ ಕರೆದು ಹಲ್ಲೆ ಮಾಡಲು ತಂತ್ರ ಮಾಡಿದ್ದ. ಈ ವೇಳೆ ನಿತೀನ್ ತನ್ನ ಸಹೋದರನ ಜೊತೆ ಬರೋದಾಗಿ ಹೇಳಿದ್ದ. ಈ ವೇಳೆ ಮಂಜೇಶ್ ಮತ್ತು ಗ್ಯಾಂಗ್ ನಿತೀನ್ ಎಂದು ಭಾವಿಸಿ ಹಲ್ಲೆ ನಡೆಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.