ದೇವರ ಪೂಜೆ ಮಾಡ್ಕೊಂಡು ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿಗೆ ತಾನು ಹೇಳಿದ ಜ್ಯೋತಿಷ್ಯವೇ ಜೀವಕ್ಕೆ ಮುಳುವಾಯ್ತು!

ದೇವರ ಪೂಜೆ ಮಾಡ್ಕೊಂಡು ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿಗೆ ತಾನು ಹೇಳಿದ ಜ್ಯೋತಿಷ್ಯವೇ ಜೀವಕ್ಕೆ ಮುಳುವಾಯ್ತು!

Published : Jul 25, 2024, 07:49 PM IST

ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಜ್ಯೋತಿಷ್ಯ ಹೇಳಿಕೊಂಡು ಜೀವನ ಮಾಡುತ್ತಿದ್ದ ಪೂಜಾರಿಗೆ ತಾನು ಹೇಳಿದ್ದ ಜ್ಯೋತಿಷ್ಯವೇ ತನ್ನ ಜೀವಕ್ಕೆ ಮುಳುವಾಯ್ತು! 

ಆತ ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿ.. ಭೂಮಿಯಲ್ಲಿ ಸಿಕ್ಕ ದಕ್ಷಿಣ ವೈಷ್ಣೋದೇವಿಯ ವಿಗ್ರಹಕ್ಕೆ ದೇವಸ್ಥಾನ ಕಟ್ಟಿ ಬಂದ ಭಕ್ತಾದಿಗಳಿಗೆ ಭವಿಷ್ಯ ಹೇಳುತ್ತಿದ್ದ.. ಇನ್ನೂ ಮಾಠ ಮಂತ್ರ ಕೂಡ ಮಾಡ್ತಿದ್ದ ಅನ್ನೋ ಮಾತಿದೆ.. ಇಂಥಹ ಪೂಜಾರಿ ಆವತ್ತು ದೇವಸ್ಥಾನಕ್ಕೆ ಬೀಗ ಹಾಕಿ ಮನೆಗೆ ಹೋಗುವಾಗ್ಲೇ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ.. ಕಾರ್​​ ಹತ್ತುವಾಗ್ಲೇ ಎಂಟ್ರಿ ಕೊಟ್ಟ ಹಂತಕ ಪೂಜಾರಿಗೆ ಚಾಕು ಹಾಕಿ ಎಸ್ಕೇಪ್​​​ ಆಗಿಬಿಟ್ಟಿದ್ದ.. ಇನ್ನೂ ತನಿಖೆ ನಡೆಸಿದ ಪೊಲೀಸರು 24 ಗಂಟೆಗಳಲ್ಲೇ ಹಂತಕನನ್ನ ಸೆರೆಹಿಡಿದಿದ್ರು.. ಆಗಲೇ ನೋಡಿ ಗೊತ್ತಾಗಿದ್ದು, ಹಂತಕ ಪೂಜಾರಿಯನ್ನ ಮುಗಿಸಲು 7 ವರ್ಷ ಕಾದಿದ್ದ ಅಂತ.. ಅಷ್ಟಕ್ಕೂ ಆ ಹಂತಕ ಯಾರು..? ಏನವನ 7 ವರ್ಷದ ದ್ವೇಷದ ಕಥೆ..? ಪೂಜಾರಿಯೊಬ್ಬನ ಬರ್ಬರ ಕೊಲೆಯ ರೋಚಕ ಇನ್ವೆಸ್ಟಿಗೇಷನ್​ ಕಥೆಯಾಗಿದೆ.

ಈತ ಯಾರ ವಿರೋಧವನ್ನೂ ಕಟ್ಟಿಕೊಂಡಿರಲಿಲ್ಲ. ದ್ವೇಷ ಅಂತೂ ಇಲ್ವೇ ಇಲ್ಲ. ಸದಾ ತಾಯಿಯ ಸೇವೆ ಮಾಡಿಕೊಂಡಿದ್ದವನು ಆವತ್ತು ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ವೈಷ್ಣೋದೇವಿ ಪೂಜೆ ಮಾಡಿಕೊಂಡಿದ್ದ ಅಜ್ಜ ಜೊತೆ ಜೊತೆಗೆ ಬರೋ ಭಕ್ತರಿಗೆ ಜ್ಯೋತಿಷ್ಯವನ್ನೂ ಹೇಳ್ತಿದ್ದ.. ಈತ ಹೇಳಿದಂತೆ ಆಗುತ್ತೆ ಅನ್ನೋದನ್ನ ಹಲವರು ನಂಬಿದ್ದರು..  ಆದ್ರೆ ಈತನಿಂದ ನನ್ನ ಕುಟುಂಬವೇ ಸರ್ವನಾಶವಾಗಿತ್ತು ಅನ್ನೋದನ್ನ ಅವನೊಬ್ಬ ನಂಬಿಬಿಟ್ಟಿದ್ದ.. ಈತನಿಗೆ ಆಗದವರು ಇದೇ ಅಜ್ಜನಿಂದ ಮಾಟ ಮಂತ್ರ ಮಾಡಿಸಿ ನನ್ನ ಕುಟುಂಬವನ್ನ ಸರ್ವನಾಶ ಮಾಡಿದ್ರು ಅಂತ ಕೋಪಕೊಂಡು ತನ್ನ ಈ ಸ್ತಿತಿಗೆ ಕಾರಣವಾದ ಅಜ್ಜನನ್ನ ಮುಗಿಸಿಬಿಡಬೇಕು ಅಂತ ನಿರ್ಧರಿಸಿದ್ದನು..

ಎರಡುವರೆ ವರ್ಷದ ಹಿಂದೆ ಮನೆಗೇ ನುಗ್ಗಿ ಅಜ್ಜನಿಗೆ ಚಾಕು ಹಾಕಿದ್ದ. ಆದ್ರೆ ಆವತ್ತು ಬದುಕಿದ್ದ ದೇವೇಂದ್ರಪ್ಪ ಎರಡನೇ ಬಾರಿಯ ಪ್ರಯತ್ನದಲ್ಲಿ ಸತ್ತೇ ಹೋಗಿದ್ದಾನೆ. ಸದ್ಯ ಪೊಲೀಸರು ಈತನನ್ನ ಅರೆಸ್ಟ್​​ ಮಾಡಿ ವಿಚಾರಣೆ ಮಾಡ್ತಿದ್ದಾರೆ.. ಆದ್ರೆ ತನ್ನ ಪಾಡಿಗೆ ದೇವಿಯ ಪೂಜೆ ಮಾಡಿಕೊಂಡು, ನಂಬಿದವರಿಗೆ ಜ್ಯೋತಿಷ್ಯ ಹೇಳುತ್ತಿದ್ದ ದೇವೇಂದ್ರಪ್ಪ ಮಾಡದ ತಪ್ಪಿಗೆ ಹೆಣವಾಗಿದ್ದಾನೆ..

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!