Aug 22, 2022, 7:36 PM IST
ಬೆಂಗಳೂರು(ಆ.22): ರಾಜಸ್ಥಾನದ ಕ್ಯಾಸಿನೋದಲ್ಲಿನ ನಡೆಯುತ್ತಿರುವ ಪಾರ್ಟಿ ಮೇಲೆ ಜೈಪುರ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ 13 ಮಹಿಳೆಯರು ಸೇರಿದಂತೆ ಒಟ್ಟು 84 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ ಮೂವರು ಪೊಲೀಸರು ಸೇರಿದ್ದಾರೆ ಅನ್ನೋ ಮಾಹಿತಿಯನ್ನು ಜೈಪುರ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಡ್ಯೂಟಿಗೆ ರಜೆ ಹಾಕಿ ರೇವ್ ಪಾರ್ಟಿಗೆ ಹಾಜರಾಗಿದ್ದ ಆಂಜಿನಪ್ಪ ಸೇರಿದಂತೆ ಮೂವರು ಕರ್ನಾಟಕ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ಇನ್ನು ಕೋಲಾರದ ತೆರಹಳ್ಳಿ ಶಾಲಾ ಶಿಕ್ಷಕ ಕೆಎನ್ ರಮೇಶ್ ಅವರನ್ನು ಬಂಧಿಸಲಾಗಿದೆ. ತಲಾ 2 ಲಕ್ಷ ರೂಪಾಯಿ ಪಾವತಿಸಿ ಈ ಪಾರ್ಟಿಗೆ ತೆರಳಿದ್ದರು.