Sep 1, 2020, 1:04 PM IST
ಬೆಂಗಳೂರು (ಸೆ. 01): ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿರುವ ಡ್ರಗ್ಸ್ ವಿಚಾರಕ್ಕೆ ಸಂಬಂಧಿದಿದಂತೆ ನಟ ಇಂದ್ರಜಿತ್ ಲಂಕೇಶ್ ಸಿಸಿಬಿ ವಿಚಾರಣೆಗೆ ಹಾಜರಾಗಿ ವಿಡಿಯೋ ಸಾಕ್ಷಿಗಳನ್ನು, ತಿಳಿದಿರುವ ಮಾಹಿತಿಗಳನ್ನು ಹೇಳಿದ್ದಾರೆ. ಡ್ರಗ್ಸ್ ಜಾಲದಲ್ಲಿರುವ 15 ಕ್ಕೂ ಹೆಚ್ಚು ನಟ-ನಟಿಯರ ಹೆಸರುಗಳನ್ನು ಹೇಳಿರುವುದಾಗಿಯೂ ಹೇಳಿದ್ದಾರೆ.
ತನಿಖಾಧಿಕಾರಿಗಳ ಬಳಿ ಮಾಹಿತಿ ನೀಡಿರುವುದು ಸಾಮಾಜಿಕ ಕಳಕಳಿಯಿಂದ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದೇ ಹೊರತು ಯಾರೊಬ್ಬರ ತೇಜೋವಧೆ ಮಾಡುವ ಉದ್ದೇಶ ನನಗಿಲ್ಲ. ಡ್ರಗ್ಸ್ ಎಂಬ ಪಿಡುಗು ಸಮಾಜದಿಂದ ನಾಶವಾಗಬೇಕು' ಎಂದು ಇಂದ್ರಜಿತ್ ಹೇಳಿದ್ದಾರೆ. ಹಾಗಾದರೆ ಸಿಸಿಬಿ ರಾಡಾರ್‌ನಲ್ಲಿರುವ ನಟ-ನಟಿಯರು ಯಾರ್ಯಾರು? ವಿಡಿಯೋದಲ್ಲಿರು ನಟಿ ಯಾರು? ಇಲ್ಲಿದೆ ಹೆಚ್ಚಿನ ಅಪ್‌ಡೇಟ್ಸ್..!