ಮತ್ತೆ ಸುದ್ದಿಗೆ ಬಂದ ಐಎಂಎ ವಂಚನೆ ಪ್ರಕರಣ/ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಸರ್ಕಾರ ಅಸ್ತು/ ಬಹುಕೋಟಿ ವಂಚನೆ ಪ್ರಕರಣ/ ಸಾವಿರಾರು ಠೇವಣಿದಾರರಿಗೆ ವಂಚನೆ
ಬೆಂಗಳೂರು(ಜ. 29) ಐಎಂಎ ವಂಚನೆ ಕೇಸ್ ನಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಬಿಗ್ ಶಾಕ್ ಸೊಕ್ಕಿದೆ. ಇಬ್ಬರು ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿ ಮೇಲೆ ತನಿಖೆ ಮಾಡಬಹುದು ಎಂದು ಸರ್ಕಾರವೇ ಸೂಚನೆ ನೀಡಿದೆ.
ಜನರಿಂದ ಹಣ ಠೆವಣಿ ಪಡೆದುಕೊಂಡು ಹೆಚ್ಚಿನ ಬಡ್ಡಿ ನೀಡುತ್ತೇನೆ ಎಂದು ನಂಬಿಸಿದ್ದ ವಂಚಕ ಮನ್ಸೂರ್ ಖಾನ್ ಬಂಧನದಲ್ಲಿದ್ದು ತನಿಖೆ ಎದುರಿಸುತ್ತಿದ್ದಾನೆ. ಇದೆಲ್ಲದರ ನಡುವೆ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧವೇ ಸರ್ಕಾರ ತನಿಖೆಗೆ ಮುಂದಾಗಿದೆ.
ಇದನ್ನು ಓದಿ: ಯಾರೀತ ಮನ್ಸೂರ್ ಖಾನ್? ಏನಿವನ ಬಂಡವಾಳ?"