ಹಣದ ಆಸೆಗೆ ಕ್ರಿಮಿನಲ್​ ಜತೆ ಪೊಲೀಸಪ್ಪ ಸಾಥ್! ಎಸ್ಕೇಪ್‌ಗೆ ಸಹಕರಿಸಿದ ಕಾನ್ಸ್​ಟೇಬಲ್​ ಅರೆಸ್ಟ್

Dec 18, 2024, 7:10 PM IST

ನಟೋರಿಯಸ್ ಕ್ರಿಮಿನಲ್ ಎಸ್ಕೆಪ್ ಮಾಡಿಸಿದ‌ ಗೋವಾ ಕ್ರೈಂ ಬ್ರಾಂಚ್‌ನ ಕಾನ್ಸ್​ಟೇಬಲ್ ಅಮಿತ್ ಎಂಬಾತ ಹುಬ್ಬಳಿಯಲ್ಲಿ ಅರೆಸ್ಟ್ ಆಗಿದ್ದಾನೆ. ಆರೋಪಿ​ ತಪ್ಪಿಸಿಕೊಳ್ಳಲು ನೆರವಾಗಿದ್ದ ಅಮಿತ್ ಕ್ರಿಮಿನಲ್‌  ಸುಲೇಮಾನ್ ಸಿದ್ದಿಕಿಯ ಕಾವಲಿಗಿದ್ದ, ಆದರೆ ಗೋವಾ ಪೊಲೀಸರ ವಶದಲ್ಲಿದ್ದ ಸುಲೇಮಾನ್ ಸಿದ್ದಿಕಿ ಎಸ್ಕೇಪ್​ ಆಗಲು ಹಣದ ಆಮಿಷವೊಡ್ಡಿದ ಪರಿಣಾಮ  ಕಾನ್ಸ್​ಟೇಬಲ್ ಅಮಿತ್​  ಆತನನ್ನು ಬಂಧನಮುಕ್ತಗೊಳಿಸಿ ಆರೋಪಿ ಸುಲೇಮಾನ್​  ಜೊತೆಗೆ ಹುಬ್ಬಳಿಗೆ ಬಂದಿದ್ದ.

ಹುಬ್ಬಳಿಗೆ ಬರುತ್ತಿದ್ದಂತೆ ಸುಲೇಮಾನ್ ತಪ್ಪಿಸಿಕೊಂಡಿದ್ದ  ಸುಲೇಮಾನ್​ ಎಸ್ಕೇಪ್​ ಬೆನ್ನಲ್ಲೆ ಕಾನ್ಸ್​ಟೇಬಲ್​  ಹುಬ್ಬಳ್ಳಿಯಲ್ಲಿ ಅರೆಸ್ಟ್ ಆಗಿದ್ದಾನೆ. 10ಕ್ಕೂ ಹೆಚ್ಚು ರಾಜ್ಯಗಳಿಗೆ ಬೇಕಾಗಿದ್ದ  ಸುಲೇಮಾನ್ ತಪ್ಪಿಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಡಿಸೆಂಬರ್ 13, 2024 ರಂದು ಗೋವಾ ಕ್ರೈಂ ಬ್ರಾಂಚ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲಾಗಿದ್ದು, ನಾಲ್ಕು ವರ್ಷಗಳಿಂದ  ಬಂಧನದಲ್ಲಿದ್ದ ಭಾರತೀಯ ರಿಸರ್ವ್ ಬೆಟಾಲಿಯನ್ (IRB) ಯ ಕಾನ್ಸ್‌ಟೇಬಲ್ ಅಮಿತ್ ನಾಯಕ್ ಅವರು ತಪ್ಪಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದು ಈಗ ದೇಶದಾದ್ಯಂತ ಭದ್ರತೆಯ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿದೆ.