
ಗ್ಯಾಂಗ್ಸ್ಟರ್ಗಳಿಗೆ ಎಲ್ಲಾ ಡಾಕ್ಯೂಮೆಂಟ್ಸ್ ಮಾಡಿಕೊಟ್ಟು ಅಂತಿಮವಾಗಿ ಪಾಸ್ಪೋರ್ಟ್ ಕೊಡಿಸಿ ವಿದೇಶಕ್ಕೆ ಸುರಕ್ಷಿತವಾಗಿ ಹಾರಿಸುತ್ತಿದ್ದ ದೊಡ್ಡ ಮಾಫಿಯಾವೊಂದನ್ನು ಹರಿಯಾಣ ಪೊಲೀಸರು ಬಯಲು ಮಾಡಿದ್ದಾರೆ.
ನಂಬೋದಿಕ್ಕೆ ಆಗೋದಿಲ್ಲ. ಆದರೂ ಸತ್ಯ. ರಾಷ್ಟ್ರೀಯ ಮಟ್ಟದ ಅಂಡರ್ವರ್ಲ್ಡ್ಗೆ ದೇಶದ ಕುಖ್ಯಾತ ಗ್ಯಾಂಗ್ಸ್ಟರ್ಗಳಿಗೆ, ಎಲ್ಲಾ ಡಾಕ್ಯೂಮೆಂಟ್ಸ್ ಮಾಡಿಕೊಟ್ಟು ಅಂತಿಮವಾಗಿ ಪಾಸ್ಪೋರ್ಟ್ ಕೊಡಿಸಿ ವಿದೇಶಕ್ಕೆ ಸುರಕ್ಷಿತವಾಗಿ ಹಾರಿಸುತ್ತಿದ್ದ ದೊಡ್ಡ ಮಾಫಿಯಾವೊಂದನ್ನು ಹರಿಯಾಣ ಪೊಲೀಸರು ಬಯಲು ಮಾಡಿದ್ದಾರೆ. ದೇಶದ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೆ, ರಾಜಕಾರಣಿಗಳಿಗೆ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ಕೀಳುವ ಅಂತಾರಾಷ್ಟ್ರೀಯ ಗ್ಯಾಂಗ್ಸ್ಟರ್ಗಳಿಗೆ ಇಂಥದ್ದೊಂದು ವ್ಯವಸ್ಥೆ ಮಾಡಿಕೊಟ್ಟು, ವಿದೇಶಕ್ಕೆ ಪರಾರಿಯಾಗಲು ಸಹಕಾರ ಕೊಡುವ ವ್ಯವಸ್ಥಿತ ಜಾಲ ಬಯಲಾಗಿದೆ. ಎಲ್ಲೂ ದೂರದ ದೇಶದಲ್ಲಿ ಕುಳಿತು ಭಾರತದ ಖ್ಯಾತನಾಮರ ಮೇಲೆ ನಡೆಯುತ್ತಿರುವ ದಾಳಿಗಳು ಈ ಮೂಲಕ ಸಂಘಟಿತವಾಗಿ ನಡೆಯುತ್ತಿದೆ ಎನ್ನುವ ಅಂದಾಜು ಸ್ಪಷ್ಟವಾಗುತ್ತಿದೆ.
ಹರಿಯಾಣದ ಕುಖ್ಯಾತ ಗ್ಯಾಂಗ್ಸ್ಟಾರ್ಗಳಿಗೆ ಬೆಂಗಳೂರು ತಲೆಮರೆಸಿಕೊಳ್ಳುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡುವ ವೇದಿಕೆಯಾಗುತ್ತಿದೆ. ಜೈಲುಗಳಲ್ಲಿ ಮುಂದೆ ಮುರಿಯಬೇಕಾಗಿದ್ದ ನಟೋರಿಯಸ್ ಹಂತಕರಿಗೆ ಮನೆ ವಸತಿ, ನಿವಾಸಿಗಳೆನಿಸಿಕೊಳ್ಳಲಿ ಅಗತ್ಯವಾದ ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್ಕಾರ್ಡ್ ಎಲ್ಲಾ ಮಾಡಿಕೊಟ್ಟು ವಿದೇಶಕ್ಕೆ ಹಾರಲು ಸಹಾಯ ಮಾಡುತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ.. ಬೆಂಗಳೂರು ಪ್ರಮುಖ ಬಡಾವಣೆಯೊಂದರಲ್ಲಿ ಹಲವಾರು ವರ್ಷಗಳಿಂದ ವಾಸಮಾಡ್ತಿದ್ದೇವೆ ಎಂದು ಆಧಾರ್ಕಾರ್ಡ್ ಸೃಷ್ಟಿಸಿ , ಆ ದಾಖಲೆಗಳೊಂದಿಗೆ ಪಾಸ್ಪೋರ್ಟ್ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ, ಅಲ್ಲಿಂದ ಪೊಲೀಸ್ ವೆರಿಫಿಕೇಶನ್ ಕ್ಲಿಯರ್ ಮಾಡಿಸಿ, ಪಾಸ್ಪೋರ್ಟ್ ಡಿಲಿವರಿ ಮಾಡುವ ಪೋಸ್ಟ್ಮೆನ್ ವರೆಗೂ ಎಲ್ಲಾ ವ್ಯವಸ್ಥೆಯನ್ನು ತಮಗೆ ಅನುಕೂಲವಾಗುವಂತೆ ಮಾಡಿಕೊಂಡು, ಅಪರಾಧ ಹಿನ್ನಲೆಯುಳ್ಳವರನ್ನು ದೇಶದಿಂದ ಪರಾರಿಯಾಗಿಸುವ ದುಷ್ಟ ಪ್ರಯೋಗಕ್ಕೆ ಬೆಂಗಳೂರು ಸಾಕ್ಷಿಯಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.