ಸಾಲದ ಬಾಧೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ತಾಯಿ ಉಮಾದೇವಿ ಸಾವಿನಿಂದ ಪಾರಾಗಿದ್ದಾರೆ. 8 ವರ್ಷದ ಮಗಳು ಶ್ರೇಷ್ಠಾ ಇನ್ನೂ ನಾಪತ್ತೆಯಾಗಿದ್ದು, ಸಾವನ್ನಪ್ಪಿರುವ ಶಂಕೆಯಿದೆ.
ಗದಗ (ಸೆ. 29): ಸಾಲದ ಬಾಧೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ತಾಯಿ ಉಮಾದೇವಿ ಸಾವಿನಿಂದ ಪಾರಾಗಿದ್ದಾರೆ. 8 ವರ್ಷದ ಮಗಳು ಶ್ರೇಷ್ಠಾ ಇನ್ನೂ ನಾಪತ್ತೆಯಾಗಿದ್ದು, ಸಾವನ್ನಪ್ಪಿರುವ ಶಂಕೆಯಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ತಾಯಿ ಉಮಾದೇವಿ ಮೂವರು ಮಕ್ಕಳೊಂದಿಗೆ ನದಿಗೆ ಹಾರುತ್ತಾರೆ. ಇಬ್ಬರು ಮಕ್ಕಳು ಬಚಾವಾಗಿದ್ದಾರೆ. ಗಿಡಗಂಟಿಗಳ ಸಂದಿಯಲ್ಲಿ ಉಮಾದೇವಿ ಸಿಲುಕಿಕೊಂಡಿದ್ದರು. ಅವರನ್ನು ರಕ್ಷಿಸಲಾಗಿದೆ.