ಶಿವಮೊಗ್ಗದ ಲವ್-ಸೆಕ್ಸ್-ದೋಖಾ/ ಖಾಸಗಿ ಕ್ಷಣಗಳ ವಿಡಿಯೋ ಇದೆ, ಹಣ ನೀಡಿದ್ರೆ ಕೊಡ್ತೇವೆ/ ಇಬ್ಬರು ಯುವಕರ ಕಿರುಕುಳಕ್ಕೆ ಪ್ರಾಣ ಕಳೆದುಕೊಂಡ ಹೆಣ್ಣು ಮಗಳು/ ಹದಿ ಹರೆಯದ ಆಸೆಗೆ ಜೀವವೇ ಬಲಿಯಾಯ್ತು
ಶಿವಮೊಗ್ಗ(ಫೆ. 01) ಇದು ಶಿವಮೊಗ್ಗದ ಲವ್-ಸೆಕ್ಸ್-ದೋಖಾ ಸ್ಟೋರಿ. ಇಬ್ಬರು ಯುವಕರು ಮತ್ತೆ ಒಬ್ಬಳು ಮುಗ್ಧ ಹೆಣ್ಣು ಮಗಳ ಕತೆ. ಪ್ರೀತಿಯಲ್ಲಿ ಬಿದ್ದ ಸಮಯದಲ್ಲಿ ಕಳೆದಿದ್ದ ಖಾಸಗಿ ಕ್ಷಣಗಳೇ ಆಕೆಯ ಪ್ರಾಣ ತೆಗೆದಿದೆ.
ನಮ್ಮ ಬಳಿ ನೀನು-ನಾನು ಕಳೆದಿರುವ ಖಾಸಗಿ ಕ್ಷಣಗಳ ವಿಡಿಯೋ ಇದೆ. 10 ಲಕ್ಷ ರೂ. ನೀಡಿದರೆ ಹಣ ವಿಡಿಯೋ ವಾಪಸ್ ಕೊಡುತ್ತೇನೆ ಎಂದಿದ್ದ ಕಿರಾತಕರು ಬರಲೇ ಇಲ್ಲ. ಇತ್ತ ಹೆಣ್ಣು ಮಗಳು ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ.