ಎರಡನೇ ಹೆಂಡತಿ ಜೊತೆ ಸೇರಿ ಮೊದಲ ಹೆಂಡತಿ ಮಗಳನ್ನೇ ಕೊಂದ ಪಾಪಿ ತಂದೆ

Aug 26, 2020, 11:21 AM IST

ಬೆಂಗಳೂರು (ಆ. 26): ಇಬ್ಬರು ಹೆಂಡತಿಯರ ಭಂಡ ಗಂಡ ಮಾಡಿದ ಪೈಶಾಚಿಕ ಕೃತ್ಯವಿದು. ಎರಡನೇ ಹೆಂಡತಿಗೆ ಮಕ್ಕಳಾಗಲಿಲ್ಲ ಎಂದು ಆಕೆಯ ಜೊತೆ ಸೇರಿ ಮೊದಲ ಹೆಂಡತಿಯ 5 ವರ್ಷದ ಮಗಳನ್ನು ಕೊಂದಿದ್ದಾನೆ. ಶವವನ್ನು ಮೂಟೆಕಟ್ಟಿ ದೇವರ ಕೋಣೆಯಲ್ಲಿಟ್ಟಿದ್ದ. ಪೊಲೀಸರ ತನಿಖೆ ವೇಳೆ ಪಾಪಿ ತಂದೆ ಮಹೇಶ್ ಸಿಕ್ಕಿ ಬಿದ್ದಿದ್ದಾನೆ. ಚಾಮರಾಜನಗರದ ಸೋಮಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 

ಮೊದಲನೇ ಪತ್ನಿ ಗಂಡನನ್ನು ಬಿಟ್ಟು ಬೇರೆ ಮದುವೆಯಾಗಿದ್ದಳು. ಈತನೂ ಕೂಡಾ ಎರಡನೇ ಮದುವೆಯಾಗಿದ್ದ. ಮೊದಲ ಪತ್ನಿಗೆ ಮತ್ತೆ ಇಬ್ಬರು ಮಕ್ಕಳು ಜನಿಸಿದ್ದರು. ಇದನ್ನು ಸಹಿಸದ ಪತಿ ಮಹೇಶ್ ಸೇಡಿಗಾಗಿ ಹೊಂಚು ಹಾಕುತ್ತಿದ್ದ. ಯಾರೂ ಇಲ್ಲದ್ದನ್ನು ನೋಡಿ  5 ವರ್ಷದ ಮಗಳನ್ನು ಅಪಹರಿಸಿ ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕ ಶವವನ್ನು ದೇವರ ಮನೆಯಲ್ಲಿಟ್ಟಿದ್ದ. ಪೊಲೀಸ್ ತನಿಖೆ ವೇಳೆ ಇದು ಬಯಲಾಗಿದೆ. 

ಲಾಕ್‌ಡೌನ್ ಸಂಕಷ್ಟ: ಮನೆ ಮಾಲಿಕಳನ್ನೇ ಹತ್ಯೆಗೈದ ದಂಪತಿ!