Bengaluru: ಒಂದು ಲಕ್ಷಕ್ಕೆ 3 ಲಕ್ಷ ಕೊಡ್ತಾರಂತೆ, ನಂಬಿ ಹಣ ಕೊಟ್ರೋ ಕೆಟ್ರಿ ಹುಷಾರ್..!

Mar 13, 2022, 10:35 AM IST

ಬೆಂಗಳೂರು (ಮಾ. 13): ದಿಢೀರ್ ಶ್ರೀಮಂತರಾಗಬೇಕು, ಹಣ ಸಂಪಾದಿಸಬೇಕು ಎನ್ನುವವರೇ ಎಚ್ಚರ..! ನಿಮ್ಮಂತವರನ್ನೇ ಹುಡುಕಿ ಟೋಪಿ ಹಾಕುತ್ತೆ ಈ ಗ್ಯಾಂಗ್. 8 ತಿಂಗಳಲ್ಲಿ 10 ಕ್ಕೂ ಹೆಚ್ಚು ಜನರಿಗೆ ಟೋಪಿ ಹಾಕಿದ್ದಾರೆ.

ಒಂದು ಲಕ್ಷಕ್ಕೆ 3 ಲಕ್ಷ, 20 ಲಕ್ಷಕ್ಕೆ 60 ಲಕ್ಷ ಕೊಡುವುದಾಗಿ ಆಸೆ ತೋರಿಸಿ ಮಹಾಮೋಸ ಮಾಡಿದ್ದಾರೆ. ಹಣ ವಾಪಸ್ ನೀಡಿ ಎಂದಿದ್ದಕ್ಕೆ, ದೂರುದಾರನಿಗೇ ಬೆದರಿಕೆ ಹಾಕಿದ್ದಾರೆ. ಎಜೆ ಹಳ್ಳಿ ಇನ್ಸ್‌ಪೆಕ್ಟರ್ ಸಂತೋಷ್, ಆರೋಪಿಗಳನ್ನು ಬಂಧಿಸಿದ್ದಾರೆ.