Dec 4, 2024, 11:54 PM IST
ಬೆಳಗಾವಿ ತಾಲೂಕಿನ ತುಮರಗುದ್ದಿಯಲ್ಲಿ ಆತಂಕದ ದೆವ್ವ ಭೂತ. ಎಡಿಟೆಡ್ ಫೋಟೋ ಬಳಸಿ ಊರಲ್ಲಿ ದೆವ್ವ ಇದೆ ಎಂದು ವೈರಲ್ ಮಾಡಲಾಗಿದೆ. ತುಮರಗುದ್ದಿ - ಮಾರಿಹಾಳ ರಸ್ತೆಯ ದೃಶ್ಯ ಎಂದು ಎಡಿಟೆಡ್ ಫೋಟೋ, ವಿಡಿಯೋ ವೈರಲ್ ಫೋಟೋ, ವಿಡಿಯೋ ವೈರಲ್ ಬೆನ್ನಲ್ಲೇ ಗ್ರಾಮದ ಮಹಿಳೆಯರು, ಮಕ್ಕಳಲ್ಲಿ ಆತಂಕ ರಾತ್ರಿಯಾದರೆ ಈ ರಸ್ತೆಯಲ್ಲಿ ಓಡಾಡಲು ಅನ್ಯ ಊರಿನ ಜನ ಹಿಂದೇಟು ಹಾಕುತ್ತಿದ್ದಾರೆ. ಬೇರೆ ಊರಿಗೆ ಕೆಲಸಕ್ಕೆ ಹೋಗುವ ಜನ ಬೇಗ ಬೇಗ ಮನೆ ಸೇರುತ್ತಿದ್ದಾರೆ. ಈ ರಸ್ತೆಯಲ್ಲಿರುವ ಮನೆಗಳಿಗೆ ಸಂಜೆ ಆಗ್ತಿದ್ದಂತೆ ನಿವಾಸಿಗಳು ಬೀಗ ಜಡಿದು ಸಂಬಂಧಿಕರು, ಸ್ನೇಹಿತರ ಮನೆಯಲ್ಲಿ ರಾತ್ರಿ ವಾಸ್ತವ್ಯ ಹೂಡುತ್ತಿದ್ದಾರೆ.
ವಾಟ್ಸಪ್ ಸ್ಟೇಟಸ್, ಫೆಸ್ಬುಕ್‌ಗಳಲ್ಲಿ ವೈರಲ್ ಆಗ್ತಿರುವ ಫೋಟೊ ಕಂಡು ಬೆಚ್ಚಿ ಬಿದ್ದಿರುವ ಜನ. ನೆರೆಯ ಊರುಗಳಿಗೂ ದೆವ್ವ ಇದೆ ಎಂಬ ವಿಷಯ ಮುಟ್ಟಿದೆ. ಗ್ರಾಮಸ್ಥರಿಗೆ ಫೋನ್ ಮಾಡಿ ದೆವ್ವ ಇದೆಯೇ ಎಂದು ನೆರೆಯ ಗ್ರಾಮಗಳ ಜನ ತಲೆ ತಿನ್ನುತ್ತಿದ್ದಾರೆ. ಫೇಕ್ ಫೋಟೋ ವೈರಲ್ ಹಿನ್ನೆಲೆ ಕಿಡಿಗೇಡಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈಯಲ್ಲಿ ಮಶಾಲ್ ಹಿಡಿದು ಅದೇ ರಸ್ತೆಯಲ್ಲಿ ಓಡಾಡಿ ಜನರ ಆತಂಕ ದೂರ ಮಾಡಲು ಯತ್ನಿಸಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಫೋಟೋ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಸಿಇಎನ್ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸ್ ದಾಖಲಿಸಿ ಕ್ರಮಕ್ಕೆ ಒತ್ತಾಯಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಗೆ ಊರಿನ ಮುಖಂಡರು ಮೌಖಿಕವಾಗಿ ದೂರು ನೀಡಿದ್ದಾರೆ.