ದೆಹಲಿ ರಿಜಿಸ್ಟರ್‌ ಕಾರಿನಿಂದ ಬೆಂಗಳೂರಲ್ಲಿ ವ್ಯಕ್ತಿಯ ಅಪಹರಣ, ಮೊಬೈಲ್‌ನಲ್ಲಿ ಸೆರೆ!

Jul 15, 2023, 1:02 PM IST

ಬೆಂಗಳೂರು (ಜು.15):  ಬೆಂಗಳೂರಿನಲ್ಲಿ ತಡರಾತ್ರಿ ವ್ಯಕ್ತಿಯ ಕಿಡ್ನಾಪ್ ನಡೆದಿದೆ. ಸ್ವಿಫ್ಟ್ ಕಾರಿನಲ್ಲಿ ಬಂದ  ನಾಲ್ಕೈದು ಜನರಿಂದ ಹೆಚ್ ಎಸ್ ಆರ್ ಲೇಔಟ್ ನ ಹ್ಯಾಂಗ್ ಒವರ್ ಪಬ್ ಬಳಿ ರಾತ್ರಿ ಹನ್ನೆರಡು ಘಂಟೆ ಸಮಯದಲ್ಲಿ  ವ್ಯಕ್ತಿಯನ್ನು ಕಿಡ್ನಾಪ್ ಮಾಡಲಾಗಿದೆ.  ಘಟನೆಯ ವಿಡಿಯೋ ವ್ಯಕ್ತಿಯೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಹಣಕಾಸು ವಿಚಾರದಲ್ಲಿ ಗಲಾಟೆ ನಡೆದು ಕಿಡ್ನಾಪ್ ಆಗಿರುವ ಬಗ್ಗೆ ಮಾಹಿತಿ ಇದೆ. ಘಟನೆ ಸಂಬಂಧ ಹೆಚ್ ಎಸ್ ಆರ್  ಲೇಔಟ್ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ. ದೆಹಲಿ ರಿಜಿಸ್ಟರ್ ಇರುವ ಕಾರಿನಿಂದ ಕಿಡ್ನಾಪ್ ಮಾಡಲಾಗಿದ್ದು, ಕಿಡ್ನಾಪ್ ಆಗಿರುವ ವ್ಯಕ್ತಿಯ ರಕ್ಷಣೆ ಮಾಡಿ,  ಪೊಲೀಸರು ಅರೋಪಿಗಳ ಬೆನ್ನು ಬಿದ್ದಿದ್ದಾರೆ.