ಹೆಂಡತಿಯ ಫ್ರೆಂಡ್, ಗಂಡನಿಗೆ ಗರ್ಲ್ ಫ್ರೆಂಡ್: ರಾತ್ರಿ ಕೊಲೆ ಮಾಡಿ ಬೆಳಿಗ್ಗೆ ನಾಟಕವಾಡಿದ್ರು!

ಹೆಂಡತಿಯ ಫ್ರೆಂಡ್, ಗಂಡನಿಗೆ ಗರ್ಲ್ ಫ್ರೆಂಡ್: ರಾತ್ರಿ ಕೊಲೆ ಮಾಡಿ ಬೆಳಿಗ್ಗೆ ನಾಟಕವಾಡಿದ್ರು!

Published : Jun 18, 2022, 10:28 PM IST

ತಾನು ಕರೆದಾಗಲೆಲ್ಲಾ ಬರುತ್ತಿದ್ದ ಪತ್ನಿಯ ಸ್ನೇಹಿತೆಯನ್ನು ಆತ ಅತಿಯಾಗಿ ಪ್ರೀತಿಸುತ್ತಿದ್ದ. ಆದರೆ, ಪ್ರೀತಿಗೆ ಮೂಲವಾಗಿದ್ದ ಸ್ನೇಹಕ್ಕೆ ಮೋಸ ಎಸಗಿದ ಆಸಾಮಿ ಪ್ರೇಯಸಿಯನ್ನೇ ಕೊಲೆ ಮಾಡಿ ಮುಗಿಸಿದ್ದ, 
 

ಬೆಂಗಳೂರು (ಜೂನ್ 18): ಪತ್ನಿಯ ಸ್ನೇಹಿತೆಯನ್ನು ಪತ್ನಿಗೆ ಗೊತ್ತಾಗದಂತೆ ಪ್ರೀತಿ ಮಾಡುತ್ತಿದ್ದ ಆಸಾಮಿ ಆಕೆಯನ್ನು ಲಾಡ್ಜ್‌ವೊಂದರಲ್ಲಿ ಸಲೀಸಾಗಿ ಕೊಲೆ ಮಾಡಿ ಬಿಟ್ಟಿದ್ದ. ಪ್ರೀತಿ ಮಾತ್ರವಲ್ಲ ಸ್ನೇಹಕ್ಕೂ ಮೋಸ ಮಾಡಿದ ಈ ಆಸಾಮಿ ಅನ್ಮೋಲ್ (Anmol).

ಬೆಂಗಳೂರಿನ ಎಚ್‌ಎಎಲ್‌ ನಿವಾಸಿಯಾಗಿರುವ ಅನ್ಮೋಲ್‌ನ ಪತ್ನಿ ದೀಪಾವತಿ ಮಂಜಿ (Deepavati Manji) ಹಾಗೂ ಕೊಲೆಯಾಗಿರುವ ದೀಪಾ ಪದಲ್  (Deepa Padal) ಇಬ್ಬರೂ ಕಾಲೇಜ್ ಮೇಟ್ಸ್. ಗೆಳತಿಯನ್ನು ನೋಡಲು ಮನೆಗೆ ಬರುತ್ತಿದ್ದ ದೀಪಾ ಪದಲ್ ಮೇಲೆ ಅನ್ಮೋಲ್ ಗೆ ಮೋಹವಾಗಿಬಿಟ್ಟಿತ್ತು. ಬಳಿಕ ಅದು ದೈಹಿಕ ಸಂಬಂಧದವರೆಗೂ ಮುಂದುವರಿದಿತ್ತು. ಪತ್ನಿ ಜೊತೆ ಮಾತಾನಾಡುವಾಗ ನಿನ್ನ ಗೆಳತಿಗೆ ನಾನು ಲೈಫ್ ಕೊಡ್ತೀನಿ ಎಂದು ಹೇಳುತ್ತಿದ್ದ.

Cover Story: ಆಸ್ಪತ್ರೆಗಳಲ್ಲಿ ಭ್ರಷ್ಟರ ಕೂಪ, ಬಡವರ ಔಷಧ ಖಾಸಗಿಯವರ ಪಾಲು?

ಆದರೆ, ದಿನಕಳೆದಂತೆ ದೀಪಾ ಪದಲ್‌ಗೆ ಅನ್ಮೋಲ್ ಮೇಲಿನ ಮೋಹ ಕಡಿಮೆಯಾಯಿತು. ತಾನು ಬೇರೊಬ್ಬನ್ನು ಪ್ರೀತಿಸುತ್ತಿದ್ದೇನೆ ಎಂದು ನೇರವಾಗಿ ಹೇಳಿದ್ದಳು. ಆರಂಭದಲ್ಲಿ ಮನವೊಲಿಸಲು ಪ್ರಯತ್ನ ಮಾಡಿದ್ದ ಅನ್ಮೋಲ್ ಬಳಿಕ ಕೊಲೆಗೆ ಸ್ಕೆಚ್ ಹಾಕಿದ್ದ. ಅದರಂತೆ ಆಕೆಯನ್ನು ಯಶವಂತಪುರ (Yeshwanthpur ) ಸಮೀಪದ ಲಾಡ್ಜ್‌ಗೆ ಬರುವಂತೆ ಹೇಳಿದ್ದ ಅನ್ಮೋಲ್ ಆಕೆಯನ್ನು ಕೊಲೆ ಮಾಡಿದ್ದ. ಬಳಿಕ ಹೆಂಡತಿಗೆ ಫೋನ್ ಮಾಡಿ ನಿನ್ನ ಗೆಳತಿಯನ್ನು ಕೊಲೆ ಮಾಡಿದ್ದೇನೆ. ಲಾಡ್ಜ್‌ನವರೇ ಕೊಂದಿದ್ದಾರೆ ಎಂದು ಹೇಳಿ ಲಾಡ್ಜ್‌ನ ಮುಂದೆ ಗೋಳಾಡು ಎಂದಿದ್ದ. ಅನ್ಮೋಲ್‌ನ ಪತ್ನಿ ಕೂಡ ಗಂಡ ಹೇಳಿದಂತೆ ಮಾಡಿದ್ದಳು.

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more