ಹುಡುಗನೊಬ್ಬ ಎದುರು ಮನೆಯವರ ವಿರೋಧ ಕಟ್ಟಿಕೊಂಡಿದ್ದ. ರಾತ್ರಿ ಹೊತ್ತು ಆ ಮನೆ ಬಾಗಿಲಿಗೆ ಕಲ್ಲು ಹೊಡೆಯುತ್ತಿದ್ದ. ಕೊನೆಗೆ ಆಗಿದ್ದೇನು? ಇಲ್ಲಿದೆ ಡಿಟೇಲ್ಸ್.
ಅವನು ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡ್ತಿದ್ದ ಮನುಷ್ಯ. ಅವನಿಗೆ ಅದ್ಯಾರು ಮಂಕು ಬೂದಿ ಎರಚಿದ್ರೋ ಏನೋ, ಅವನು ವಾಸವಿದ್ದ ಎದುರು ಮನೆಯವರ ವಿರೋಧ ಕಟ್ಟಿಕೊಂಡು ಬಿಟ್ಟ. ಎದುರು ಮನೆಯವರನ್ನ ಹೇಗೆಲ್ಲಾ ಕಾಡಿಬಿಟ್ಟ ಅಂದ್ರೆ ಆ ಮನೆಯವರು ಕನಸಲ್ಲೂ ಇವನನ್ನ ನೆನಸಿಕೊಂಡು ಬೆಚ್ಚಿ ಬಿದ್ದಿದ್ರು. ಆದ್ರೆ ಇಷ್ಟೆಲ್ಲಾ ಕಾಟ ಕೊಟ್ರು ಎದುರು ಮನೆಯವರು ಮಾತ್ರ ತೆಪ್ಪಗೇ ಇದ್ರು. ಆದ್ರೆ ಇದನ್ನೇ ಅಡ್ವಾಂಟೇಜ್ ತೆಗೆದುಕೊಂಡ ಆತ ಅವತ್ತೊಂದು ದಿನ ಆ ಮೆನಯ ಯಜಮಾನನ್ನೇ ಮುಗಿಸಲು ನಿರ್ಧರಿಸಿಬಿಟ್ಟ. ಅದಕ್ಕಾಗಿ ಮಚ್ಚು ಹಿಡಿದು ಅವನಿದ್ದ ಕಡೆಗೆ ನುಗ್ಗೇಬಿಟ್ಟ. ಹೀಗೆ ಎದುರು ಮನೆಯ ಹುಡುಗನ ದ್ವೇಷದ ಕಥೆ ಮತ್ತು ಆ ದ್ವೇಷದ ಕಿಚ್ಚು ಅದೇಗೆ ಎರಡು ಫ್ಯಾಮಿಲಿಯನ್ನ ಸುಟ್ಟಿತು ಎಂಬ ಕಹಾನಿ ಇಲ್ಲಿದೆ.