ದೆವ್ವ-ಭೂತ ಅಂದ್ರೆ ಸಾಮಾನ್ಯವಾಗಿ ಭಯಪಡುತ್ತೇವೆ. ಪೂಜೆ, ಪುನಸ್ಕಾರಗಳನ್ನು ಮಾಡುತ್ತೇವೆ. ಜನರ ಈ ಭಯ, ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ನಕಲಿ ಬಾಬಾಗಳು ಹುಟ್ಟಿಕೊಂಡಿದ್ದಾರೆ. ದೆವ್ವ, ಭೂತ ಬಿಡಿಸುತ್ತೇವೆ ಎಂದು ಜನರನ್ನು ಮೋಸ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‌ನ್ನು ಕವರ್ ಸ್ಟೋರಿ ತಂಡ ಬಯಲಿಗೆಳೆದಿದೆ.
ದೆವ್ವ-ಭೂತ ಅಂದ್ರೆ ಸಾಮಾನ್ಯವಾಗಿ ಭಯಪಡುತ್ತೇವೆ. ಪೂಜೆ, ಪುನಸ್ಕಾರಗಳನ್ನು ಮಾಡುತ್ತೇವೆ. ಜನರ ಈ ಭಯ, ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ನಕಲಿ ಬಾಬಾಗಳು (Fake Babas) ಹುಟ್ಟಿಕೊಂಡಿದ್ದಾರೆ. ದೆವ್ವ, ಭೂತ ಬಿಡಿಸುತ್ತೇವೆ ಎಂದು ಜನರನ್ನು ಮೋಸ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‌ನ್ನು ಕವರ್ ಸ್ಟೋರಿ ತಂಡ ಬಯಲಿಗೆಳೆದಿದೆ.
ದಾವಣಗೆರೆಯ ಹರಿಹರ ತಾ ದೇವರಬೆಳಕೆರೆಯಲ್ಲಿ ನಕಲಿ ಬಾಬಾಗಳು ತಮ್ಮನ್ನು ತಾವೇ ದೇವಮಾನವರು ಎಂದು ಘೋಷಿಸಿಕೊಂಡಿದ್ದರು. 6 ತಿಂಗಳ ಗರ್ಭಿಣಿ ಸುಸ್ತು ಅಂತ ಬಂದಾಗ ಎರಡೆರಡು ದೆವ್ವಗಳು ಬಂದಿವೆ ಎಂದು ಭಯಬೀಳಿಸಿದ್ದರು. ದೆವ್ವ ಬಿಡಿಸುತ್ತೇನೆ ಎಂದು ಹೇಳಿ ನವಿಲಿನ ದಂಡದಲ್ಲಿ ಗರ್ಭಿಣಿಗೆ ಮನಸೋ ಇಚ್ಚೆ ದಂಡಿಸುತ್ತಾನೆ. ಈ ದೃಶ್ಯ ಕವರ್ ಸ್ಟೋರಿ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಷ್ಟ ಅಂತ ಯಾರೇ ಬರಲಿ ಅವರಿಗೆ ದೆವ್ವ ಹಿಡಿದಿದೆ ಎಂದು ಹೆದರಿಸಿ, ಹಿಂಸಿಸುತ್ತಾರೆ. ಇವರ ಅಸಲಿ ಮುಖ ಬಯಲಿಗೆಳೆಯಲು ಕವರ್ ಸ್ಟೋರಿ ತಂಡ ಟೀಂ ನ ಸದಸ್ಯರೊಬ್ಬರನ್ನು ಅವರ ಬಳಿ ಕಳುಹಿಸುತ್ತದೆ. ಇವರಿಗೆ ದೆವ್ವ ಹಿಡಿದಿದೆ, ಸರ ಮಾಡಿ ಎಂದು ಕೇಳುತ್ತೇವೆ. ಆಗ ನಕಲಿ ಬಾಬಾಗಳ ಹೇಗೆ ಬಾರಿಸುತ್ತಾರೆ..? ಏನೆಲ್ಲಾ ನಾಟಕ ಮಾಡುತ್ತಾರೆ ಎಂದು ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.