ಇಲ್ಲಿ ಚೆಕ್‌ಪೋಸ್ಟ್‌ಗಳಿಲ್ಲ, ಎಗ್ಗಿಲ್ಲದೇ ನಡೆಯುತ್ತಿದೆ ಟಿಂಬರ್ ಮಾಫಿಯಾ

Feb 8, 2021, 5:19 PM IST

ಬೆಂಗಳೂರು (ಫೆ. 08): ಚಿಕ್ಕಮಗಳೂರು ಜಿಲ್ಲೆ ಕಲಸ ಬಳಿ ಒಂದು ಆದಿವಾಸಿ ಕುಟುಂಬ ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಆ ಮನೆಯನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಹರಸಾಹಸಪಡುತ್ತಿದೆ. ಅರಣ್ಯ ಇಲಾಖೆ ಈ ಕೆಲಸ ನಮಗೆ ಅಚ್ಚರಿ ಉಂಟು ಮಾಡಿತು. 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಷ್ಟೆಷ್ಟು ಕಡೆ ಅರಣ್ಯ ಒತ್ತುವರಿ ಮಾಡಲಾಗಿದೆ ಎಂದು ಕವರ್ ಸ್ಟೋರಿ ತಂಡ ಕಾರ್ಯಾಚರಣೆಗಿಳಿಯಿತು. ಅಲ್ಲಿ ಮರದ ದಿಮ್ಮಿಗಳನ್ನು ಆರಾಮಾಗಿ ಸಾಗಿಸುತ್ತಿದ್ದರು. ಒಂದೇ ಒಂದು ಕಡೆ ಚೆಕ್‌ಪೋಸ್ಟ್‌ಗಳಿಲ್ಲ. ಈ ಮಾಫಿಯಾವನ್ನು ಬೆನ್ನಟ್ಟಿ ಹೋದಾಗ ಕವರ್ ಸ್ಟೋರಿ ಕಾರ್ಯಾಚರಣೆಯಲ್ಲಿ ಬಯಲಾಯ್ತು ಅನೇಕ ವಿಚಾರಗಳು..