Cover Story: ಹಣ ಬಿಡುಗಡೆ, ಕೆಲಸ ಮಾತ್ರ ಆಗಿಲ್ಲ; ದಾವಣಗೆರೆಯಲ್ಲಿ ನರೇಗಾ ಕರ್ಮಕಾಂಡ!

Jul 23, 2022, 3:27 PM IST

ಗ್ರಾಮೀಣ ಭಾಗದ ಬಡ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡುವ ಯೋಜನೆ ನರೇಗಾ. ಪ್ರತಿದಿನದ ಕೂಲಿ 289 ರೂ, ಈಗ ಅದನ್ನ ಕೇಂದ್ರ ಸರ್ಕಾರ 20 ರೂ ಹೆಚ್ಚಿಸಿದ್ದು 309 ರೂ ಆಗಿದೆ. ವರ್ಷದಲ್ಲಿ 100 ದಿನಗಳ ಕಾಲ ಕೆಲಸ ಕೊಟ್ಟು, 309 ರೂ ದಿನಗೂಲಿ ಕೊಡಲಾಗುತ್ತದೆ. ಗ್ರಾಮದ ರಸ್ತೆ, ಕೆರೆ ಹೂಳೆತ್ತುವುದು, ಚರಂಡಿ ರಿಪೇರಿ ಸೇರಿ ಸಾಕಷ್ಟು ಕೆಲಸ ಮಾಡಲಾಗಿದೆ. ಈ ಯೋಜನೆಗಾಗಿ ಸರ್ಕಾರ ಕೋಟಿ ಕೋಟಿ ಖರ್ಚು ಮಾಡುತ್ತಿದೆ. ಆದರೆ ಈ  ಯೋಜನೆಯಲ್ಲಿ ಕೋಟಿಗಟ್ಟಲೇ ಅಕ್ರಮವಾಗಿದೆ ಎಂಬ ಮಾಹಿತಿ ಕವರ್ ಸ್ಟೋರಿಗೆ ಬಂದಿತ್ತು. ಇದನ್ನು ಪತ್ತೆ ಹಚ್ಚಲು ಕವರ್ ಸ್ಟೋರಿ ಕಾರ್ಯಾಚರಣೆಗಿಳಿಯುತ್ತದೆ. 

ದಾವಣಗೆರೆ ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಅಕ್ರಮ ನಡೆದಿದೆ. ಇಲ್ಲಿನ ಬಹುತೇಕ ಹಳ್ಳಿಗಳಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ, ಹಣ ಮಾತ್ರ ಬಿಡುಗಡೆಯಾಗಿದೆ. ಏನಂತಾರೆ ಈ ಭಾಗದ ಜನ..? ಏನೀ ಅಕ್ರಮ..? ಕವರ್ ಸ್ಟೋರಿಯಲ್ಲಿ.