ಅನಾರೋಗ್ಯದಿಂದ ಬಳಲುತ್ತಿರುವ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ವಿರುದ್ಧ ಸಿಸಿಬಿಗೆ ದೂರು/ ರೈ ಆಸ್ತಿ ಮೇಲೆ ಕಣ್ಣು ಬಿತ್ತಾ? / ಆಸ್ತಿ ಹಂಚಿಕೆಯಲ್ಲಿ ಮೋಸವಾಗಿದೆ/
ಬೆಂಗಳೂರು(ಫೆ. 27) ಅನಾರೋಗ್ಯದಿಂದ ಬಳಲುತ್ತಿರುವ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ವಿರುದ್ಧ ಸಿಸಿಬಿಗೆ ದೂರು ನೀಡಲಾಗಿದೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ಮುತ್ತಪ್ಪ ರೈ ಅವರ ವಿರುದ್ಧ ಅವರ ಬೆಂಬಲಿಗ ರಾಕೇಶ್ ಮಲ್ಲಿ ಎಂಬುವರೇ ದೂರು ನೀಡಿದ್ದಾರೆ. ಈ ದೂರು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಮುತ್ತಪ್ಪ ರೈ ಆಸ್ತಿ ಮೇಲೆ ಕಣ್ಣಿಟ್ಟಿದ್ದಾರಾ? ಎಂಬ ಅನುಮಾನ ಹುಟ್ಟಿಕೊಂಡಿದೆ.