Sep 2, 2020, 1:54 PM IST
ಬೆಂಗಳೂರು (ಸೆ. 02): ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಿದೆ. ರಾಜಕಾರಣಿಗಳು ಹಾಗೂ ನಿರ್ಮಾಪಕರ ನಡುವೆ ವಾರ್ ಶುರುವಾಗಿದೆ.
ಬೆಂಗಳೂರಿನ ಶಾಸಕರಿಗೆ ಕರೆ ಮಾಡಿ, ನಮ್ಮ ಮಕ್ಕಳ ಹೆಸರು ಬಹಿರಂಗವಾದ್ರೆ ಹುಷಾರ್, ನಮ್ಮ ಮಕ್ಕಳ ಹೆಸರು ಬಾಯ್ಬಿಟ್ರೆ ನಿಮ್ಮ ಮಕ್ಕಳ ಬಂಡವಾಳವನ್ನು ಮೀಡಿಯಾದಲ್ಲಿ ಹರಾಜು ಹಾಕ್ತೀವಿ. ನಿಮ್ಮ ಮಕ್ಕಳು ನಮ್ಮವರ ಜೊತೆ ಏನೇನ್ ಮಾಡಿದ್ದಾರೆ ನಮಗೆ ಗೊತ್ತು' ಎಂದು ನಿರ್ಮಾಪಕರು ಧಮ್ಕಿ ಹಾಕಿದ್ದಾರೆ. ಪ್ರಭಾವಿ ಬಿಜೆಪಿ ಶಾಸಕನಿಗೆ ನಿರ್ಮಾಪಕರೊಬ್ಬರು ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!