Chitradurga Police Recovers Stolen Goods : ಆಭರಣದ ಅಂಗಡಿಯಲ್ಲ, ಇವೆಲ್ಲ ಕದ್ದ ಮಾಲು!

Dec 15, 2021, 6:19 PM IST

ಚಿತ್ರದುರ್ಗ (ಡಿ. 15)   ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಕಳ್ಳತನವಾಗಿದ್ದ  (Robbery) ಬರೊಬ್ಬರಿ 2 ಕೋಟಿಗೂ ಅಧಿಕ ಮೌಲ್ಯದ ವಾಹನಗಳು ಹಾಗೂ ಚಿನ್ನಾಭರಣಗಳು (Gold)ಪತ್ತೆ ಮಾಡುವಲ್ಲಿ ಜಿಲ್ಲೆಯ ಖಾಕಿ ಪಡೆ (Karnataka Police) ಯಶಸ್ವಿಯಾಗಿದೆ. ಹೀಗೆ ಸಾಲಾಗಿ ಜೋಡಿಸಿರೋ ಹಣದ ಕಟ್ಟುಗಳು, ಪಳ ಪಳ ಹೊಳೆಯುತ್ತಿರೋ ಚಿನ್ನಾಭರಣಗಳು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗದ ಪೊಲೀಸ್ ಕವಾಯತು ಮೈದಾನ‌.

Gang Robbery : ಮನೆಗೆ ನುಗ್ಗಿದ ಗ್ಯಾಂಗ್ ದರೋಡೆ : ವ್ಯಾಪಾರಿಯ ಅರೆ ನಗ್ನಗೊಳಿಸಿದ ಮಹಿಳೆಯರು

ಹೌದು 2020-21 ನೇ ಸಾಲಿನಲ್ಲಿ ಜನರನ್ನು ಕಂಗಾಲಾಗುವಂತೆ ಕಾಡಿಸಿದ ಕೋವಿಡ್ ಲಾಕ್ ಡೌನ್  ನಡುವೆಯೂ, ಚಿತ್ರದುರ್ಗ ಜಿಲ್ಲೆಯಾದ್ಯಂತ ಕಳ್ಳರು ತಮ್ಮ ಕೈಚಳಕ ತೋರಿದ್ದರು.  ಕೊರೊನಾ ಭೀತಿಯಿಂದಾಗಿ ಸ್ವಗ್ರಾಮಕ್ಕೆ ತೆರಳಿದ್ದ ಮನೆಗಳು ಹಾಗೂ ಬೀಗ ಹಾಕಿದ್ದ ಅಂಗಡಿಗಳನ್ನು ಟಾರ್ಗೆಟ್ ಮಾಡಿದ್ದ ಕಳ್ಳರು 25 ಮೋಟರ್ ಬೈಕ್ ಗಳು ಮತ್ತು ಒಂದು ಕಾರು ಸೇರಿದಂತೆ 2 ಕೋಟಿ 12ಲಕ್ಷದ 64 ಸಾವಿರದ 734 ರೂಪಾಯಿ ಮೌಲ್ಯದ ನಗದು ಹಾಗು ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿದ್ದರು.

 ಆದ್ರೆ ಕಳ್ಳತನವಾದ ಬೆನ್ನಲ್ಲೇ ಆ  ಪ್ರಕರಣಗಳ ಬೆನ್ನತ್ತಿದ ಚಿತ್ರದುರ್ಗ ಎಸ್ಪಿ ಜಿ.ರಾಧಿಕಾ ನೇತೃತ್ವದ  ಪೊಲೀಸ್ ತಂಡ  ವಿನೂತನ ತಂತ್ರಜ್ಞಾನ ಹಾಗೂ ಚಾಣಕ್ಷತೆಯಿಂದ 65 ಪ್ರಕರಣಗಳನ್ನು ಪತ್ತೆ ಮಾಡಿದೆ. ಹೀಗಾಗಿ ಕಳ್ಳತನ ಪ್ರಕರಣಗಳಲ್ಲಿ  ಕಳ್ಳರಿಂದ ವಶಪಡಿಸಿಕೊಂಡ ಎಲ್ಲ ವಸ್ತುಗಳನ್ನು ಮಾಲೀಕರಿಗೆ ಹಿಂದಿರುಗಿಸಲಾಯಿತು.