ಸಿಸಿಬಿ ಬಲೆಯಿಂದ ತಪ್ಪಿಸಿಕೊಳ್ಳಲು ರಾಗಿಣಿ ಖತರ್ನಾಕ್ ಪ್ಲಾನ್; ಏನ್ ಐಡ್ಯಾ ಅಂತೀರಾ..!

Sep 4, 2020, 10:06 AM IST

ಬೆಂಗಳೂರು (ಸೆ. 04): ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾದಲ್ಲಿ ಒಬ್ಬೊಬ್ಬರ ಹೆಸರು ಹೊರ ಬರುತ್ತಿದೆ.  'ತುಪ್ಪದ ಬೆಡಗಿ' ರಾಗಿಣಿ ದ್ವಿವೇದಿಗೆ ಸಿಸಿಬಿ ಬಿಸಿತುಪ್ಪವಾಗಿದೆ. ಅನಾರೋಗ್ಯ ನೆಪವೊಡ್ಡಿ ಸೋಮವಾರ ವಿಚಾರಣೆಗೆ ಬರುವುದಾಗಿ ರಾಗಿಣಿ ಸಬೂಬು ಹೇಳಿದ್ದರು. ಆದರೆ ಅವೆಲ್ಲಾ ಆಗಲ್ಲ. ಇಂದೇ ವಿಚಾರಣೆಗೆ ಬರಬೇಕು ಎಂದು ಸಿಸಿಬಿ ತಾಕೀತು ಮಾಡಿದೆ. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ ಸಿಸಿಬಿ ಕಠಿಣ ಕ್ರಮಕ್ಕೆ ಮುಂದಾಗಿದೆ. 

ಇನ್ನೊಂದು ಕಡೆ ಸಿಸಿಬಿ ಬಲೆಯಿಂದ ತಪ್ಪಿಸಿಕೊಳ್ಳಲು ರಾಗಿಣಿ ಖತರ್ನಾಕ್ ಪ್ಲಾನ್ ಮಾಡಿದ್ದಾರೆ. ಫೋನ್ ಬದಲಿಸಿ ಹಳೆ ವಾಟ್ಸಾಪನ್ನು ಡಿಲೀಟ್ ಮಾಡಿ, ಮತ್ತೆ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಫೋನ್‌ನಲ್ಲಿದ್ದ ಸಾಕ್ಷ್ಯ ನಾಶ ಮಾಡಿ ಸಿಸಿಬಿಗೆ ಚಳ್ಳೆ ಹಣ್ಣು ತಿನ್ನಿಸಲು ಮುಂದಾದರಾ ರಾಗಿಣಿ? 

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ; ತನಿಖೆಗೂ ಮೊದಲೇ ಕ್ಲೀನ್ ಚಿಟ್!