ಅಬ್ಬಬ್ಬಾ... ಇದೆಂಥಾ ಫ್ರೆಂಡ್‌ಶಿಪ್: ಪ್ರತಿಷ್ಠೆಗಾಗಿ ಪ್ರೇಯಸಿಯನ್ನೇ ಗಿಫ್ಟ್‌ ಕೊಟ್ಟ ಗೆಳೆಯ!

ಅಬ್ಬಬ್ಬಾ... ಇದೆಂಥಾ ಫ್ರೆಂಡ್‌ಶಿಪ್: ಪ್ರತಿಷ್ಠೆಗಾಗಿ ಪ್ರೇಯಸಿಯನ್ನೇ ಗಿಫ್ಟ್‌ ಕೊಟ್ಟ ಗೆಳೆಯ!

Published : Oct 05, 2023, 12:31 PM IST

ಪ್ರೀತಿ ಮಧುರ ತ್ಯಾಗ ಅಮರ ಎಂಬ ಮಾತು ಗೊತ್ತೇ ಇದೆ. ಅದೆಷ್ಟೋ ಸಿನಿಮಾಗಳಲ್ಲಿ ನಟರು ತಮ್ಮ ಪ್ರೀತಿಯನ್ನು ಬಚ್ಚಿಟ್ಟು ತಾನು ಪ್ರೀತಿಸಿದ ಹುಡುಗಿಯನ್ನು ತನ್ನ ಸ್ನೇಹಿತನ ಜೊತೆ ಮದುವೆ ಮಾಡಿಸಿ ತ್ಯಾಗಮಯಿ ಅನಿಸಿಕೊಂಡಿದ್ದಾರೆ. 

ರಾಮನಗರ (ಅ.05): ಪ್ರೀತಿ ಮಧುರ ತ್ಯಾಗ ಅಮರ ಎಂಬ ಮಾತು ಗೊತ್ತೇ ಇದೆ. ಅದೆಷ್ಟೋ ಸಿನಿಮಾಗಳಲ್ಲಿ ನಟರು ತಮ್ಮ ಪ್ರೀತಿಯನ್ನು ಬಚ್ಚಿಟ್ಟು ತಾನು ಪ್ರೀತಿಸಿದ ಹುಡುಗಿಯನ್ನು ತನ್ನ ಸ್ನೇಹಿತನ ಜೊತೆ ಮದುವೆ ಮಾಡಿಸಿ ತ್ಯಾಗಮಯಿ ಅನಿಸಿಕೊಂಡಿದ್ದಾರೆ. ಆದರೆ, ಇದಕ್ಕೆ ಕೊಂಚ ಭಿನ್ನವಾಗಿರುವ ಘಟನೆಯೊಂದು ರಾಮನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ತನ್ನ ಸ್ನೇಹಿತ ಕೇಳಿದನೆಂದು ಪ್ರಿಯತಮೆಗೂ ವಿಷಯ ತಿಳಿಸದೇ ಈಗಾಗಲೇ ಮದುವೆ ಆಗಿದ್ದ ಸ್ನೇಹಿತನಿಗೆ ಯುವತಿಯನ್ನು ಬಿಟ್ಟುಕೊಟ್ಟು ಮತ್ತೊಮ್ಮೆ ಮದುವೆ ಆಗಲು ಕಿರಾತಕನೊಬ್ಬ ಸಹಾಯ ಮಾಡಿದ್ದಾನೆ. ಈಗ ಸದ್ಯಕ್ಕೆ ಕಿಡ್ನಾಪ್ ಕೇಸ್​ನಲ್ಲಿ ಮಂಜು(21) ಮತ್ತು ರವಿ (33) ಯನ್ನು ಐಜೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಐಜೂರಿನ ನ್ಯೂ ಎಕ್ಸಪರ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯ ಜೊತೆಗೆ ಮಂಜು ಸಲುಗೆ ಬೆಳೆಸಿದ್ದ. ಇವರಿಬ್ಬರು ಭೇಟಿ ಮಾಡಿದಾಗ ಕೆಲವು ಫೋಟೋಗಳನ್ನು ತೆಗೆಸಿಕೊಂಡಿದ್ದರು. ಅಲ್ಲದೆ ಮಂಜು ತನ್ನ ಸ್ನೇಹಿತ ರವಿ ಬಳಿ ಹೋಗಿ ತಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದನು. ಮಂಜು ಹಾಗೂ ರವಿ ಇಬ್ಬರೂ ಒಂದೇ ಗ್ರಾಮದವರು. ಮಂಜು ತನ್ನ ಎಲ್ಲಾ ವಿಚಾರಗಳನ್ನು ರವಿ ಬಳಿ ಹೇಳಿಕೊಳ್ಳುತ್ತಿದ್ದನು. ಮಂಜು ಮತ್ತು ಯುವತಿ ಓಡಾಡುತ್ತಿದ್ದದನ್ನು ರವಿ ನೋಡಿದ್ದನು. ಕೊನೆಗೆ ರವಿ ತನ್ನ ಸ್ನೇಹಿತ ಮಂಜುಗೆ ತನ್ನ ಗರ್ಲ್ ಫ್ರಂಡ್ ಅನ್ನು ಬಿಟ್ಟು ಕೊಡುವಂತೆ ಕೇಳಿದ್ದಾನೆ. 

ನಿನ್ನ ಗರ್ಲ್ ಫ್ರೆಂಡ್ ನನಗೆ ಕೊಡು. ನಾನು ಆಕೆಯನ್ನು ಮದುವೆ ಮಾಡಿಕೊಳ್ಳಬೇಕು. ನೀನೇನು ನೋಡಲು ಚೆನ್ನಾಗಿದ್ದೀಯಾ ಎಷ್ಟು ಬೇಕಾದರೂ ಹುಡುಗಿಯರನ್ನು ಪಟಾಯಿಸಬಹುದು. ನನಗೆ ನಿನ್ನ ಗರ್ಲ್ ಫ್ರೆಂಡ್ ಕೊಟ್ಟರೆ ಮದುವೆ ಆಗುತ್ತೇನೆ ಎಂದು ಮಂಜುಗೆ ಡಿಮ್ಯಾಂಡ್ ಮಾಡಿದ್ದನು. ರವಿ ಮಾತಿಗೆ ಮರಳಾದ ಮಂಜು ತನ್ನ ಪ್ರಿಯತಮೆಯನ್ನು ಮದುವೆ ಮಾಡಿಕೋ ಎಂದು ಯುವತಿಯನ್ನು ರವಿಯ ಜೊತೆ ಕಳಿಸಲು ಪ್ಲ್ಯಾನ್ ಮಾಡಿದ್ದಾನೆ. ಯುವತಿಯನ್ನು ಆಟದ ಗೊಂಬೆಯಂತೆ ತನ್ನ ಕೈಯಿಂದ ತನ್ನ ಸ್ನೇಹಿತನ ಕೈಗೆ ರವಾನಿಸುವಷ್ಟು ಸುಲಭವಾಗಿ ಯುವತಿಯನ್ನು ರವಿಯ ಜೊತೆ ಕಳುಹಿಸಿದ್ದಾನೆ.

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more