ಡಿಜೆ ಹಳ್ಳಿ ಗಲಭೆ ಪ್ರಕರಣದ ದೊಂಬಿಕೋರರ ಬಿಡುಗಡೆಗೆ ಆಗ್ರಹಿಸಿ NDPS ನ್ಯಾಯಾಲಯದ ನ್ಯಾಯಾಧೀಶರು, ಪೊಲೀಸ್ ಆಯುಕ್ತರು, ಹಾಗೂ ಜಂಟಿ ಆಯುಕ್ತರಿಗೆ ಪುಟ್ಟ ಗಾತ್ರದ ಸ್ಫೋಟಕ ವಸ್ತು ಸಮೇತ ಕಿಡಿಗೇಡಿಗಳು ಪತ್ರ ಕಳುಹಿಸಿ ಬೆದರಿಸಿದ್ದಾರೆ.
ಬೆಂಗಳೂರು (ಅ. 20): ಡ್ರಗ್ ಜಾಲದಲ್ಲಿ ಸಿಲುಕಿರುವ ನಟಿಯರು, ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ದೊಂಬಿಕೋರರ ಬಿಡುಗಡೆಗೆ ಆಗ್ರಹಿಸಿ NDPS ನ್ಯಾಯಾಲಯದ ನ್ಯಾಯಾಧೀಶರು, ಪೊಲೀಸ್ ಆಯುಕ್ತರು, ಹಾಗೂ ಜಂಟಿ ಆಯುಕ್ತರಿಗೆ ಪುಟ್ಟ ಗಾತ್ರದ ಸ್ಫೋಟಕ ವಸ್ತು ಸಮೇತ ಕಿಡಿಗೇಡಿಗಳು ಪತ್ರ ಕಳುಹಿಸಿ ಬೆದರಿಸಿದ್ದಾರೆ. ಈ ಘಟನೆಯನ್ನು ಖಾಕಿ ಪಡೆ ಗಂಭೀರವಾಗಿ ಪರಿಗಣಿಸಿದ್ದು NDPS ಆವರಣದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.