ಬಿಎಂಟಿಸಿ ಬಸ್ ಕಂಡಕ್ಟರ್ ಲುಕ್ಕಿಗೆ ಜಾರಿ ಬಿದ್ದ ಯುವತಿ: ಜೀವನದ ಸಾರಥಿಯಾಗ್ತೀನಿ ಎಂದವನ ಬಣ್ಣ ಬಯಲು!

ಬಿಎಂಟಿಸಿ ಬಸ್ ಕಂಡಕ್ಟರ್ ಲುಕ್ಕಿಗೆ ಜಾರಿ ಬಿದ್ದ ಯುವತಿ: ಜೀವನದ ಸಾರಥಿಯಾಗ್ತೀನಿ ಎಂದವನ ಬಣ್ಣ ಬಯಲು!

Published : Jan 15, 2025, 12:25 PM ISTUpdated : Jan 15, 2025, 03:52 PM IST

ದೂರು ಕೊಟ್ಟಾಕೆ ನನಗೆ ಗಂಡ ಬೇಕು, ಹೊಟ್ಟೆಯಲ್ಲಿರುವ ಮಗುವಿಗೆ ತಂದೆ ಬೇಕೆಂದು ಹಠ ಹಿಡಿದಿದ್ದಾಳೆ. ನ್ಯಾಯ ಕೊಡಿಸಿ ಎಂದು ಬೆಂಗಳೂರು ಪೊಲೀಸ್ ಕಮಿಷನರ್, ಈಶಾನ್ಯ ಡಿಸಿಪಿ, ಮಹಿಳಾ ಸಹಾಯವಾಣಿಗೆ ಅಂತಾ ಅಲೆದಾಡುತ್ತಿದ್ದಾಳೆ.

ಹುಬ್ಬಳ್ಳಿ(ಜ.15):  ಆಕೆ ಜೀವನದಲ್ಲಿ ತುಂಬಾನೇ ನೊಂದಿದ್ದಳು. ಕಟ್ಕೊಂಡ ಗಂಡ ತನಗಿಂತ 15 ವರ್ಷ ದೊಡ್ಡವನು ಎಂಬ ಕೊರಗು ಆಕೆಯನ್ನ ಸದಾಕಾಲ ಕಾಡುತ್ತಿತ್ತು. ಹೀಗಾಗಿ ಆ ಸಂಬಂಧಕ್ಕೆ ಪುಲ್ ಸ್ಟಾಪ್ ಇಟ್ಟು ಹೊಸ ಜೀವನ ಶುರು ಮಾಡಿದ್ಲು. ಆಗಲೇ ನೋಡಿ ನಿನ್ನ ಜೀವನಕ್ಕೆ ಸಾರಥಿಯಾಗ್ತೀನಿ ಅಂತ ಬಂದವನು ಬಿರುಗಾಳಿಯನ್ನೇ ಎಬ್ಬಿಸಿದ್ದ. 

ಹೀಗೆ ಕೈ ಕೈ ಹಿಡಿದು ರೀಲ್ಸ್ ಮಾಡಿದ್ದೇ ಮಾಡಿದ್ದು. ಆಕೆಯ ಜತೆ ಈತ ಫೋಸ್ ಕೊಟ್ಟಿದ್ದೇ ಕೊಟ್ಟಿದ್ದು. ಯುವತಿಯೂ ಇವನೇ ನನ್ನ ಮನ್ಮಥ ಎಂದು ಹಾಡಿದ್ದೇ ಹಾಡಿದ್ದು. ಹೀಗೆ, ಯುವತಿಯ ಜೊತೆ ಹೆಜ್ಜೆ ಹಾಕುತ್ತಿರುವ ಈತನ ಹೆಸರು ಮಂಜುನಾಥ್. ಬೆಂಗಳೂರು ಎಂ.ಎಸ್.ಪಾಳ್ಯ ಬಿಎಂಟಿಸಿ ಡಿಪೋವಿನ ಕಂಡಕ್ಟರ್ ಕಮ್ ಡ್ರೈವರ್. ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದ್ರೆ ಇದೆಲ್ಲವನ್ನೂ ಬಚ್ಚಿಟ್ಟು ಯುವತಿಯೊಬ್ಬಳಿಗೆ ಪ್ರೀತಿ ಪ್ರೇಮ ಅಂಥ ವಂಚಿಸಿದ್ದಾನೆ. ಪರಿಣಾಮ ಯುವತಿ ಈಗ ಮೂರು ತಿಂಗಳ ಗರ್ಭಿಣಿ.

2025ರ ಆರಂಭದಲ್ಲೇ ನಿಜವಾಗ್ತಿದ್ಯಾ ವಂಗಾ ಬಾಬಾ ಭವಿಷ್ಯ: ಡೇಂಜರ್ ಸಿಗ್ನಲ್, ಏನಿದು

ಮಂಜುನಾಥ್ ಬೆಂಗಳೂರಿನ ಎಂ.ಎಸ್.ಪಾಳ್ಯ ಟು ಯಲಹಂಕ ರೂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಈ ವೇಳೆ ಖಾಸಗಿ ಕಂಪನಿಯೊಂದರಲ್ಲಿ ರಿಸೆಪ್ಟಿನಿಸ್ಟ್ ಆಗಿದ್ದ ಯುವತಿಯೊಬ್ಬಳು ಪ್ರತಿ ದಿನ ಮಂಜುನಾಥ್ ಕರ್ತವ್ಯ ನಿರ್ವಹಿಸುತ್ತಿದ್ದ ಬಸ್ ಹತ್ತುತ್ತಿದ್ದಳು. ನಂಬರ್ ಕೇಳಿದ್ದಕ್ಕೆ ಯುವತಿ ಕೊಡೋದಿಲ್ಲ ಅಂದಿದ್ದಳು. ಆದ್ರೆ, ಇನ್ಸ್ ಟಾಗ್ರಾಂ ಐಡಿ ಪತ್ತೆ ಮಾಡಿ ಚಾಟ್ ಮಾಡಿದ್ದ. ನಂತರ ಯುವತಿಯನ್ನ ಪ್ರೀತಿಯ ಬಲೆಗೆ ಬೀಳಿಸಿದ್ದ.

AI ತಂತ್ರಜ್ಞಾನದಲ್ಲಿ ಮೂಡಿಬಂದ ದಿಗ್ಗಜರು: ಸಂಕ್ರಾಂತಿ ಹಬ್ಬಕ್ಕೆ ಬಂದ ಡಾ.ರಾಜ್,ವಿಷ್ಣು, ಅಂಬಿ!

ಪ್ರೀತಿಸೋದಕ್ಕೂ ಮುನ್ನವೇ ಯುವತಿ ತನಗೆ ವಿಚ್ಛೇಧನ ಆಗಿರುವ ವಿಚಾರವನ್ನು ಮಂಜುನಾಥ್ ಗೆ ಹೇಳಿದ್ದಳು. ಪರವಾಗಿಲ್ಲ ನಾನು ನಿನಗೆ ಬಾಳು ಕೊಡ್ತೀನಿ ಅಂತ ಪುಂಗಿ ಬಿಟ್ಟಿದ್ದ ಇವನು ಯುವತಿ ಜತೆ ಹಲವು ಕಡೆ ಸುತ್ತಾಡಿದ್ದ. ಸುತ್ತಾಡಿದ್ದಷ್ಟೇ ಅಲ್ಲ ಆಕೆಯ ಜತೆ ದೇವಾಲಯದಲ್ಲಿ ಮದುವೆ ಕೂಡ ಆಗಿದ್ದ. ನಂತರ ಯಲಹಂಕದಲ್ಲಿ ಮನೆ ಮಾಡಿ ಆಗಾಗ ಬಂದು ಹೋಗ್ತಿದ್ದ. ಇದಾದ ಕೆಲ ತಿಂಗಳಿನಲ್ಲಿ ಮಂಜುನಾಥ್ ನ ಮದುವೆ ವಿಷಯ ಈಕೆಗೆ ಗೊತ್ತಾಗಿದೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ನೀನ್ಯಾರು ನನಗೆ ಗೊತ್ತಿಲ್ಲ ಅಂತ ಅವೈಡ್ ಮಾಡೋಕೆ ಶುರು ಮಾಡಿದ್ದಾನೆ. ಹೀಗಾಗಿ ಯುವತಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 

ದೂರು ಕೊಟ್ಟಾಕೆ ನನಗೆ ಗಂಡ ಬೇಕು, ಹೊಟ್ಟೆಯಲ್ಲಿರುವ ಮಗುವಿಗೆ ತಂದೆ ಬೇಕೆಂದು ಹಠ ಹಿಡಿದಿದ್ದಾಳೆ. ನ್ಯಾಯ ಕೊಡಿಸಿ ಎಂದು ಬೆಂಗಳೂರು ಪೊಲೀಸ್ ಕಮಿಷನರ್, ಈಶಾನ್ಯ ಡಿಸಿಪಿ, ಮಹಿಳಾ ಸಹಾಯವಾಣಿಗೆ ಅಂತಾ ಅಲೆದಾಡುತ್ತಿದ್ದಾಳೆ.

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more