Bengaluru: ರಾಜಧಾನಿಯಲ್ಲಿ ಬಿಗ್ಗೆಸ್ಟ್ ದರೋಡೆ, ಬೈಕ್‌ನಲ್ಲಿ ಸಾಗಿಸುತ್ತಿದ್ದ ಕೆಜಿ ಗಟ್ಟಲೆ ಚಿನ್ನ ದೋಚಿ ಪರಾರಿ!

Jul 15, 2023, 12:06 PM IST

ಬೆಂಗಳೂರು (ಜು.15): ಬೆಂಗಳೂರಿನಲ್ಲಿ ಬಿಗ್ಗೆಸ್ಟ್ ರಾಬರಿ ನಡೆದಿದೆ. ಕಣ್ಣು ಮುಚ್ಚಿ ಬಿಡುವುದರಲ್ಲಿ ದೋಚಿದ್ದು ಮೂರುವರೆ ಕೆಜಿ ಚಿನ್ನವನ್ನು ಸಿನಿಮೀಯ ರೀತಿ ರಾಬರಿ ಮಾಡಿದ್ದಾರೆ. ಕೆ ಆರ್ ಮಾರ್ಕೆಟ್  ಫ್ಲೈ ಓವರ್ ಮೇಲೆ ಸುಮಾರು 1 ಕೋಟಿ 70 ಲಕ್ಷ ಮೌಲ್ಯದ ಚಿನ್ನವನ್ನು ಆರೋಪಿಗಳು ದೋಚಿದ್ದಾರೆ.

ವ್ಯಾಪಾರಿಯೋರ್ವ ತಮ್ಮ ಸ್ಕೂಟರ್ ನಲ್ಲಿ ಚಿನ್ನ ಇಟ್ಟುಕೊಂಡು  ಫ್ಲೈಒವರ್ ಕಡೆ ಹೋಗುತ್ತಿದ್ದಾಗ ಮತ್ತೊಂದು ಬೈಕ್ ನಲ್ಲಿ ಬಂದಿದ್ದ ಇಬ್ಬರು ಅರೋಪಿಗಳು ಫ್ಲೈ ಒವರ್ ಮೇಲೆ ಚಲಿಸುತಿದ್ದ ಬೈಕ್ ಗೆ ಅಡ್ಡಬಂದು ಬೈಕ್ ಸ್ಲೋ ಮಾಡಿಸಿದ್ದಾರೆ. ಬಳಿಕ ನೇರವಾಗಿ ಸ್ಕೂಟರ್ ನಲ್ಲಿ  ಚಿನ್ನ ಇದ್ದ  ಬ್ಯಾಗ್  ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಈ ಸಂಬಂದ ಕಾಟನ್‌ ಪೇಟೆ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ. ಘಟನೆ ಸ್ಥಳದಲ್ಲಿ ಸಿಸಿಟಿವಿ ಕೂಡ ಇಲ್ಲದಿರುವುದು ಕೂಡ ತನಿಖೆಗೆ ಬಾರಿ ಹಿನ್ನೆಡೆ ಆಗಬಹುದು. ಬೈಕ್ ಸವಾರ ಗ್ರಾಹಕರೊಬ್ಬರಿಗೆ ಚಿನ್ನ ತೆಗೆದುಕೊಂಡು ಹೋಗುತ್ತಿದ್ದ ಎಂದು ತಿಳಿದುಬಂದಿದೆ.