ಬೆಂಗಳೂರಿನಲ್ಲಿ ಶ್ರದ್ಧಾ ವಾಕರ್‌ ಹಂತಕನಂತೆ ಮತ್ತೊಬ್ಬ ಕ್ರೂರಿ: ಫ್ರಿಡ್ಜ್‌ನಲ್ಲಿ 50 ಪೀಸ್ ಮಹಿಳೆಯ ಮಾಂಸ!

ಬೆಂಗಳೂರಿನಲ್ಲಿ ಶ್ರದ್ಧಾ ವಾಕರ್‌ ಹಂತಕನಂತೆ ಮತ್ತೊಬ್ಬ ಕ್ರೂರಿ: ಫ್ರಿಡ್ಜ್‌ನಲ್ಲಿ 50 ಪೀಸ್ ಮಹಿಳೆಯ ಮಾಂಸ!

Published : Sep 23, 2024, 06:56 PM IST

ಬೆಂಗಳೂರಿನಲ್ಲಿ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಫ್ರಿಡ್ಜ್‌ನಲ್ಲಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ. ಕೊಲೆಯಾದ ಮಹಿಳೆ ಯಾರು, ಆಕೆಯನ್ನು ಕೊಲೆ ಮಾಡಿದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ದೆಹಲಿಯ ಶ್ರದ್ಧಾ ವಾಕರ್​​ ಕೇಸ್​​ ನಿಮಗೆ ನೆನಪಿರಬಹುದು. ಪ್ರೀತಿಸಿದ ಹುಡುಗನೇ ಯುವತಿಯನ್ನ ಪೀಸ್​​ ಪೀಸ್​​ ಮಾಡಿ ಫ್ರಿಡ್ಜ್‌​ನಲ್ಲಿಟ್ಟು ನಂತರ ಒಂದೊಂದು ಭಾಗವನ್ನ ಒಂದೊಂದು ದಿಕ್ಕಿಗೆ ಎಸೆದಿದ್ದನು. ಆವತ್ತು ಆ ಕೇಸ್​ ಇಡೀ ದೇಶವನ್ನೇ ಶೇಕ್​ ಮಾಡಿತ್ತು. ಆದರೆ, ಇವತ್ತು ಇಂಥದ್ದೇ ಒಂದು ಪ್ರಕರಣ ನಮ್ಮದೇ ಬೆಂಗಳೂರಿನಲ್ಲಿ ನಡೆದು ಹೋಗಿದೆ. ಮಹಿಳೆಯೊಬ್ಬಳನ್ನ ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ತುಂಬಿ ಫ್ರಿಡ್ಜ್‌​​​ನಲ್ಲಿಟ್ಟಿದ್ದಾನೆ. ನಂತರ ಹಂತಕ ಯಾರಿಗೂ ಗೊತ್ತಾಗದ ಹಾಗೆ ಜಾಗ ಖಾಲಿ ಮಾಡಿದ್ದಾನೆ. ಅಷ್ಟಕ್ಕೂ ಅಲ್ಲಿ ಬರ್ಬರವಾಗಿ ಕೊಲೆಯಾದ ಆ ಮಹಿಳೆ ಯಾರು? ಹಂತಕ ಅಷ್ಟೊಂದು ಕ್ರೂರವಾಗಿ ಯಾಕಾಗಿ ಕೊಂದಿದ್ದಾನೆ... ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮಹಿಳೆಯ ಬರ್ಬರ ಕೊಲೆಯ ಕಂಪ್ಲೀಟ್​​ ಡಿಟೇಲ್ಸ್​​​ ಇವತ್ತಿನ ಎಫ್​.ಐ.ಆರ್​​​.

ಫ್ರಿಡ್ಜ್‌ನಲ್ಲಿ ಸಿಕ್ಕ ಪೀಸ್​​ ಪೀಸ್​​ ಬಾಡಿಯನ್ನ ಕಂಡು ಪೊಲೀಸರೇ ದಂಗಾಗಿ ಹೋಗಿದ್ದಾರೆ. ಇನ್ನೂ ಆ ಕೂಡಲೇ ತನಿಖೆ ಆರಂಭಿಸಿದ ಪೊಲೀಸರು ಅಲ್ಲಿ ಸತ್ತವಳು ಮಹಾಲಕ್ಷ್ಮಿ ಅನ್ನೋದನ್ನ ತಿಳಿದುಕೊಂಡಿದ್ದಾರೆ. ಆಕೆಗೆ ಮದುವೆಯಾಗಿ ನಾಲಕ್ಕು ವರ್ಷದ ಮಗು ಕೂಡ ಇದೆ. ಆದ್ರೆ ವರ್ಷದಿಂದ ಗಂಡನಿಂದ ದೂರವಾಗಿ ಒಂಟಿ ಜೀವನ ನಡೆಸುತ್ತಿದ್ದಳು. ಬೆಂಗಳೂರಿನ ಪ್ರತಿಷ್ಠಿತ ಶಾಪಿಂಗ್ ಮಾಲ್‌ ಒಂದರಲ್ಲಿ ಕೆಲಸ ಮಾಡಿಕೊಂಡು ತನ್ನಪಾಡಿಗೆ ಜೀವನ ಮಾಡುತ್ತಿದ್ದಳು. ಆದರೆ, 20 ದಿನಗಳಿಂದ ಆಕೆ ಎಲ್ಲೂ ಕಾಣಿಸುತ್ತಿರಲಿಲ್ಲ. ಅವಳಿಗೆ ಕಾಲ್​ ಮಾಡಿದ್ರೆ ಫೋನ್​ ಸ್ವಿಚ್​​ ಆಫ್ ಆಗಿತ್ತು​. ಅನುಮಾನ ಬಂದು ಆಕೆಯ ಕುಟುಂಬದವರು ಒಂದೆರಡು ಬಾರಿ ಮನೆಯ ಬಳಿ ಬಂದು ಹೋಗಿದ್ದಾರೆ. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ, ಇವತ್ತು ಆಕೆ ಹೆಣವಾಗಿದ್ದಾಳೆ. ಆಕೆಯನ್ನ ಕೊಂದು ತುಂಡು ತುಂಡಾಗಿ ಕತ್ತರಿಸಿದ್ದಾರೆ. ಇನ್ನೂ ಆಕೆಯನ್ನ ಕೊಂದಿದ್ದು ಯಾರು ಅನ್ನೋದು ಮಾತ್ರ ಈ ಕ್ಷಣಕ್ಕೂ ನಿಗೂಢ.

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!