Jan 30, 2022, 2:54 PM IST
ಬೆಂಗಳೂರು (ಜ. 30): ರಾಜಧಾನಿಯಲ್ಲಿ ರಸ್ತೆಗುಂಡಿಗಳಿಗೆ (Pothole ) ಅದೆಷ್ಟು ಬಲಿಯಾಗಬೇಕೋ ಏನೋ, ಎಷ್ಟೇ ದುರಂತಗಳು ನಡೆದರೂ ಬಿಬಿಎಂಪಿ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇಂದು ರಸ್ತೆ ಗುಂಡಿ ತಪ್ಪಿಸಲು ಹೋಗಿ ಮಹಿಳೆ ರಸ್ತೆ ಮೇಲೆ ಬಿದ್ದಿದ್ದಾರೆ. ಮಹಿಳೆ ಮೇಲೆ ಲಾರಿ ಹರಿದು ಮಹಿಳೆ ಸಾವನ್ನಪ್ಪಿದ್ದಾರೆ. ಮಾಗಡಿ ಮುಖ್ಯ ರಸ್ತೆಯ ಬ್ಯಾಡರಹಳ್ಳಿಯಲ್ಲಿ ಘಟನೆ ನಡೆದಿದೆ. 38 ವರ್ಷದ ಶರ್ಮಿಳಾ ಎಂಬಾಕೆ ಮೃತ ದುರ್ದೈವಿ. ಲಾರಿ ಚಾಲಕ ಮಾದೇಶ್‌ನನ್ನ ಖಾಕಿ ವಶಕ್ಕೆ ಪಡೆದಿದೆ.