ರಾಜಧಾನಿಯಲ್ಲಿ ಹವಾಲಾ ದಂಧೆ (Hawala Deal) ಜೋರಾಗಿದೆ. ದುಬೈ- ಕೇರಳ (Dubai Kerala) ಮೂಲಕ ಹವಾಲಾ ಹಣ ಬೆಂಗಳೂರು ತಲುಪುತ್ತಿದೆ. ಕೇರಳದಿಂದ ಬಸ್, ಟ್ರೇನ್ ಮಾರ್ಗವಾಗಿ ಬೆಂಗಳೂರಿಗೆ ತಲುಪುತ್ತಿದೆ.
ಬೆಂಗಳೂರು (ಡಿ. 08): ರಾಜಧಾನಿಯಲ್ಲಿ ಹವಾಲಾ ದಂಧೆ (Hawala Deal) ಜೋರಾಗಿದೆ. ದುಬೈ- ಕೇರಳ (Dubai Kerala) ಮೂಲಕ ಹವಾಲಾ ಹಣ ಬೆಂಗಳೂರು (Bengaluru) ತಲುಪುತ್ತಿದೆ. ಕೇರಳದಿಂದ ಬಸ್, ಟ್ರೇನ್ ಮಾರ್ಗವಾಗಿ ಬೆಂಗಳೂರಿಗೆ ತಲುಪುತ್ತಿದೆ.
ನಾಲ್ವರಿಗೆ ದಿನಕ್ಕೆ 29 ಲಕ್ಷ ಟಾರ್ಗೆಟ್ ನೀಡಿದ್ದನಂತೆ ಕಿಂಗ್‌ಪಿನ್. 20 ಲಕ್ಷ ಖಾತೆಗೆ ಹಾಕಲು ಕಿಂಗ್‌ಪಿನ್ ರಿಯಾಜ್ ತಾಕೀತು ಮಾಡಿದ್ದಾನೆ. ವಾಟ್ಸಾಪ್ ಮೂಲಕ ಖಾತೆ ನಂಬರ್ ಕಳುಹಿಸುತ್ತಿದ್ದ ಕಿಂಗ್‌ಪಿನ್. ಈವರೆಗೆ 31 ಕೋಟಿ ವರ್ಗಾವಣೆಯಾಗಿರುವ ಮಾಹಿತಿ ಇದೆ. ಕಿಂಗ್ ಪಿನ್ ರಿಯಾಜ್ ಬಂಧನಕ್ಕೆ ಪುಟ್ಟೇನಹಳ್ಳಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.