ಆನ್‌ಲೈನ್ ಖಾತೆ ಕನ್ನ ತಪ್ಪಿಸಲು ಬೆಂಗಳೂರು ಪೊಲೀಸ್ ಗೋಲ್ಡನ್ ಅವರ್

Jun 3, 2021, 7:23 PM IST

ಬೆಂಗಳೂರು(ಜೂ. 03) ಡಿಜಿಟಲ್ ಪೇಮೆಂಟ್ ಅನಿವಾರ್ಯ ಎಂಬ ಸ್ಥಿತಿಗೆ ಬಂದಿದ್ದೇವೆ. ಇದರ ಜತೆಗೆ ನಿಮ್ಮ ಖಾತೆಗೆ ಆನ್ ಲೈನ್ ನಲ್ಲೆ ಕನ್ನ ಹಾಕುವ ಖದೀಮರು ಹೆಚ್ಚಾಗಿದ್ದಾರೆ.  ಇದನ್ನು ತಡೆಗೆ ಬೆಂಗಳೂರು ಪೊಲೀಸರು ಗೋಲ್ಡನ್ ಅವರ್ ಜಾರಿ ಮಾಡಿದ್ದು ಭಾರೀ ಪರಿಣಾಮಕಾರಿಯಾಗಿದೆ. 

ಡ್ರೆಸ್ ಹಿಂದಿರುಗಿಸಲು ಹೋಗಿ ಎರಡು ಲಕ್ಷ ರೂ. ಕಳೆದುಕೊಂಡ ಮಹಿಳೆ

ಆನ್‌ಲೈನ್ ನಲ್ಲಿ ದೋಖಾ ಮಾಡೋರ ಅಕೌಂಟ್ ಹಣ ಹೋಗದಂತೆ ತಡೆ ಹಾಕಲಾಗಿದೆ. ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ತೆರೆಯಲಾಗಿದ್ದು 112 ಕ್ಕೆ ಕರೆ ಮಾಡಿ  ತಕ್ಷಣ ಘಟನೆ ವಿವರ ತಿಳಿಸಬೇಕು.  ಇಲ್ಲಿವರೆಗೂ ಜನರ 48 ಕೋಟಿ ಹಣ ಖದೀಮರ ಪಾಲಾಗದಂತೆ ಪೊಲೀಸರು ಉಳಿಸಿದ್ದಾರೆ.  3175 ಪ್ರಕರಣಗಳಿಂದ 1312 ಬ್ಯಾಂಕ್ ಖಾತೆಗಳನ್ನ ಫ್ರೀಸ್ ಮಾಡಿದ್ದಾರೆ.

ವಂಚನೆ ನಿಮ್ಮ ಗಮನಕ್ಕೆ ಬಂದ ತಕ್ಷಣ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದರೆ ವಂಚಕರ ಖಾತೆಗೆ ಹಣ ಹೊಗುವುದನ್ನು ನಿಲ್ಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.