ಚಿನ್ನದ ಆಸೆಗೆ 10 ಲಕ್ಷ ಪಂಗನಾಮ ಹಾಕಿಸಿಕೊಂಡ, ಅಜ್ಜಿ ಗ್ಯಾಂಗ್ ಚಿನ್ನದ ಆಟಕ್ಕೆ ಬೆಸ್ತು ಬಿದ್ದ ಬಂಗಾರ ವ್ಯಾಪಾರಿ!

Feb 5, 2023, 7:06 PM IST

ಬೆಂಗಳೂರು (ಫೆ.05): ಮನೆಯಲ್ಲಿ ಮದುವೆಯಿದೆ ಎಂದು ಹಳೆಯ ಚಿನ್ನದ ಸರವನ್ನು ಮಾರಾಟಕ್ಕೆ ತಂದಿದ್ದ ಗ್ರಾಹಕರಿಂದ ಬರೋಬ್ಬರಿ 80 ಗ್ರಾಂ ಚಿನ್ನದ (ಲಕ್ಷಾಂತರ ರೂ.) ಹಣವನ್ನು ಲಾಭ ಮಾಡಿಕೊಳ್ಳಲು ಮುಂದಾಗಿದ್ದ ಬಂಗಾರದ ಅಂಗಡಿ ಮಾಲೀಕನಿಗೆ ಅಜ್ಜಿ ಗ್ಯಾಂಗ್‌ವೊಂದು ನಕಲಿ ಚಿನ್ನ ಕೊಟ್ಟು ಯಾಮಾರಿಸಿದ ಘಟನೆ ಬೆಂಗಳೂರಿನ ಕೆಂಪಾಪುರ ಅಗ್ರಹಾರದಲ್ಲಿ ನಡೆದಿದೆ. ನಕಲಿ ಚಿನ್ನವನ್ನು ಕೊಟ್ಟು ಬರೋಬ್ಬರಿ 10 ಲಕ್ಷ ರೂ. ಮೌಲ್ಯದ ಅಸಲಿ ಚಿನ್ನಾಭರಣಗಳನ್ನು ಖರೀದಿಸಿ ಟೋಪಿ ಹಾಕಿದ್ದಾರೆ.

Jewelers Fraud: ನಕಲಿ ಚಿನ್ನಕೊಟ್ಟು ಬಂಗಾರದ ಅಂಗಡಿ ಮಾಲೀಕನಿಗೇ ಟೋಪಿ ಹಾಕಿದ

ಅಮೃತಹಳ್ಳಿಯ ಧನಲಕ್ಷ್ಮಿ ಜ್ಯೂವಲರ್ಸ್ ನಲ್ಲಿ 10 ಲಕ್ಷ ಮೌಲ್ಯದ ಚಿನ್ನಾಭರಣ ಶಾಪಿಂಗ್ ಮಾಡಿದ ಅಜ್ಜಿ ಗ್ಯಾಂಗ್‌ ನಕಲಿ ಚಿನ್ನವನ್ನು ಕೊಟ್ಟು ಅಂಗಡಿ ಮಾಲೀಕನಿಗೆ ಯಾಮಾರಿಸಿದ ಘಟನೆ ನಡೆದಿದೆ. ನನ್ನ ಮಗಳ ಮದುವೆ ಇದೆ. ನನ್ನ ತಾಯಿಯ ಹಳೆ ಆಭರಣ ಕೊಟ್ಟು ಹೊಸ ಒಡವೆ ಖರೀದಿ ಮಾಡಬೇಕು ಎಂದು ಅಜ್ಜಿಯ ಮಗ ರಾಹುಲ್ ಹೇಳಿಕೊಂಡಿದ್ದಾನೆ. ನಾವು ಇಲ್ಲಿಯೇ ನಾಗವಾರದ ನಿವಾಸಿಗಳು ಎಂದು ಅಜ್ಜಿಯನ್ನು ತೋರಿಸಿದ್ದಾನೆ. ನಂತರ ಅಜ್ಜಿ ತನ್ನ ಬ್ಯಾಗಿನಿಂದ 240 ಗ್ರಾಂ. ತೂಕದ ಬಂಗಾರದ ಗುಂಡಿನ ಸರ ತೆಗೆದಿದ್ದಾರೆ. ಆ ಸರವನ್ನು ಅಂಗಡಿ ಮಾಲೀಕನಿಗೆ ಕೊಟ್ಟಿದ್ದಾರೆ.