Mar 30, 2023, 5:33 PM IST
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಮಲೇರಿಸಿಕೊಂಡು ಓಡಾಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅವರಿಗೆ ನೆರವಾಗುವಂತೆ ಕೆಲವು ಕುಟುಂಬಗಳೇ ಗಾಂಜಾ ಸಾಗಣೆ ಮತ್ತು ಮಾರಾಟಕ್ಕೆ ನಿಂತಿರುವುದು ಅಸಹ್ಯ ಸಂಗತಿಯಾಗಿದೆ.
ಇಲ್ಲೊಂದು ಕುಟುಂಬದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಗಂಡನನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಆದರೆ, ಗಾಂಜಾ ಮಾರಾಟದಿಂದ ಹೆಚ್ಚು ಕಷ್ಟಪಡದೇ ಅತ್ಯಧಿಕ ಹಣ ಗಳಿಸುವ ದಾರಿಯನ್ನು ಕಂಡುಕೊಂಡಿದ್ದ ಕುಟುಂಬಕ್ಕೆ ಬೇರೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ಗಂಡ ಜೈಲು ಸೇರಿದರೂ ಆತನ ಹೆಂಡತಿಯೇ ಸ್ವತಃ ತಾನು ಮಹಿಳೆಯೆಂಬ ಅಂಜಿಕೆಯನ್ನೂ ಬಿಟ್ಟು ಗಾಂಜಾ ಮಾರಾಟಕ್ಕೆ ಇಳಿದಿದ್ದಾಳೆ. ಆದರೆ, ಈಕೆ ತನ್ನ ಗಾಂಜಾ ಮಾರಾಟ ದಂಧೆಗೆ ತನ್ನ ಇಬ್ಬರು ಅಪ್ರಾಪ್ತ ಮಕ್ಕಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಳು ಎಂಬುದು ಇಲ್ಲಿ ಸಮಾಜವೇ ತಲೆ ತಗ್ಗಿಸುವಂತಹ ವಿಚಾರವಾಗಿದೆ.
ವರ್ಷದ ಬಳಿಕ ಮಡಹಳ್ಳಿ ಗುಡ್ಡ ಕುಸಿತ ಆರೋಪಿಗಳ ಬಂಧನ: ಕೇರಳದಲ್ಲಿ ಅರೆಸ್ಟ್
ಇನ್ನು ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯಿಂದ 13 ಲಕ್ಷ ರೂ. ಮೌಲ್ಯದ 26 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಮಹಿಳೆಯನ್ನು ನಗ್ಮಾ (27) ಎಂದು ಗುರುತಿಲಾಗಿದ್ದು, ಕಲಾಸಿಪಾಳ್ಯ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಂಜಾ ಮಾರಾಟ ಪ್ರಕರಣದಲ್ಲಿ ಕಳೆದ ತಿಂಗಳು ಈಕೆಯ ಗಂಡನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಜೆಜೆ ನಗರ ಪೊಲೀಸರಿಂದ ಪತಿ ಮುಜ್ಜು ಅರೆಸ್ಟ್ ಆಗಿದ್ದನು. ಗಂಡ ಜೈಲು ಸೇರಿದ ಬಳಿಕ ಈ ಕಸುಬನ್ನು ಪತ್ನಿ ನಗ್ಮಾ ಮುಂದುವರೆಸಿದ್ದಳು. ಮಾತ್ರವಲ್ಲ ಈ ದಂಧೆಗೆ ತನ್ನ ಮೂವರು ಮಕ್ಕಳನ್ನೇ ಈ ಮಹಿಳೆ ಬಳಸಿಕೊಂಡಿದ್ದಳು.