ಉತ್ತರ ಭಾರತದ ಕ್ರಿಮಿನಲ್​ಗಳಿಗೆ ಬೆಂಗಳೂರು ಸ್ವರ್ಗ: ರಾಜ್ಯ ರಾಜಧಾನಿಯಲ್ಲಿ ಸ್ವೀಪರ್​ ಸೆಲ್​ಗಳಿದ್ದಾವಾ?

ಉತ್ತರ ಭಾರತದ ಕ್ರಿಮಿನಲ್​ಗಳಿಗೆ ಬೆಂಗಳೂರು ಸ್ವರ್ಗ: ರಾಜ್ಯ ರಾಜಧಾನಿಯಲ್ಲಿ ಸ್ವೀಪರ್​ ಸೆಲ್​ಗಳಿದ್ದಾವಾ?

Published : Jul 10, 2025, 06:25 PM IST

ನಿಮಗೆ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆಗಳು ನೆನಪಿರಬಹುದು. ಪೊಲೀಸ್ ಜೀಪುಗಳನ್ನೇ ಸುಟ್ಟು, ಠಾಣೆಗೆ ಬೆಂಕಿಯಿಟ್ಟ ಘಟನೆಯನ್ನ ಯಾರೂ ಮರೆಯುವುದಿಲ್ಲ. ಅಂಥಹ ಏರಿಯಾಗಳಲ್ಲಿ ಈಗ ಗ್ಯಾಂಗ್​ಸ್ಟಾರ್​ಗಳಿಗೆ ಪಾಸ್​​ಪೋರ್ಟ್​ ಮಾಡಿಸಿಕೊಡುವ ಕೆಲಸ ಕೂಡಾ ಆಗ್ತಾ ಇದೆ.

ನಿಮಗೆ ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆಗಳು ನೆನಪಿರಬಹುದು. ಪೊಲೀಸ್ ಜೀಪುಗಳನ್ನೇ ಸುಟ್ಟು, ಠಾಣೆಗೆ ಬೆಂಕಿಯಿಟ್ಟ ಘಟನೆಯನ್ನ ಯಾರೂ ಮರೆಯುವುದಿಲ್ಲ. ಅಂಥಹ ಏರಿಯಾಗಳಲ್ಲಿ ಈಗ ಗ್ಯಾಂಗ್​ಸ್ಟಾರ್​ಗಳಿಗೆ ಪಾಸ್​​ಪೋರ್ಟ್​ ಮಾಡಿಸಿಕೊಡುವ ಕೆಲಸ ಕೂಡಾ ಆಗ್ತಾ ಇದೆ. ಇಂತಾ ಕೆಲಸ ಆಗ್ತಾ ಇದೆ ಅನ್ನೋದನ್ನು ಕಂಡು ಹಿಡಿಯೋದಕ್ಕೆ ಹರಿಯಾಣ ಪೊಲೀಸರು ಬರಬೇಕಾಯ್ತು ನೋಡಿ. ಅಮೀನ್ ಉಸ್ಮಾನ್ ಸೇಠ್ ನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಪೊಲೀಸರ ಸ್ಟೈಲ್​ನಲ್ಲಿ ವಿಚಾರಣೆ ಮಾಡಿದಾಗ ತಾನು ಆ ಮೂವರಿಗೂ ಯಾವ ರೀತಿ ಯಾರ ಸಹಾಯ ಪಡೆದು ಪಾಸ್​ಪೋರ್ಟ್​ ಮಾಡಿಕೊಟ್ಟೆ ಅನ್ನುವ ಅಂಶವನ್ನ ಬಾಯಿಬಿಟ್ಟಿದ್ದಾನೆ.

ಆ ವಿಚಾರಣೆ ವೇಳೆ ಬೆಳಕಿಗೆ ಬಂದವನೇ ಹೆಗಡೆನಗರದ  ಶಿವರಾಮ ಕಾರಂತ ನಗರ ಪೋಸ್ಟ್ ಆಫೀಸ್​​ನ ಪೋಸ್ಟ್ ಮೆನ್ ಕೇಶವಮೂರ್ತಿ..!  ಬೆಂಗಳೂರು ಪೊಲೀಸರು ನಟೋರಿಯಸ್ ಗ್ಯಾಂಗ್​​ಸ್ಟರ್​ಗಳಿಗೆ ಪಾಸ್​​ಪೋರ್ಟ್​ ಮಾಡಿಕೊಡಲು ಹಲವು ರೀತಿಯಲ್ಲಿ ಸಹಾಯ ಮಾಡಿದ್ದಾರೆ.. ನಮ್ಮ ಅನುಮಾನ ಮತ್ತಷ್ಟು ಹೆಚ್ಚಾಗೋಕೆ ಮತ್ತೊಂದು ಕಾರಣ ಕೂಡಾ ಇದೆ. ಯಾಕಂದ್ರೆ, ಇದೇ ಕೇಸ್​ನಲ್ಲಿ ಈ ಮೂವರು ಗ್ಯಾಂಗ್​ಸ್ಟರ್​ಗಳ ಪಾಸ್​ಪೋರ್ಟ್​ ಡಿಲಿವರಿ ಮಾಡಬೇಕಾಗಿದ್ದ ಪೋಸ್ಟ್​​ ಮೆನ್ ಕೇಶವಮೂರ್ತಿ ಕೂಡಾ ಅರೆಸ್ಟ್ ಆಗಿದ್ದಾನೆ. ಜೈಲಿನಿಂದ ಬೇಲ್ ಮೇಲೆ ಬಂದಿರುವ ಪೋಸ್ಟ್​ಮೆನ್ ಕೇಶವಮೂರ್ತಿಯನ್ನು  ಏಷ್ಯಾನೆಟ್​ ಸುವರ್ಣನ್ಯೂಸ್​ ಬೇಟಿಯಾಗಿದೆ. ಈತ ನಕಲಿ ಪಾಸ್​ಪೋರ್ಟ್​ ಕೇಸ್​ನ ಸಂಪೂರ್ಣ ಮಾಹಿತಿ ಬಿಚ್ಚಿಟ್ಟದ್ದ. ರಹಸ್ಯ ಕ್ಯಾಮರಾದಲ್ಲಿ ಪಾಸ್​ಪೋರ್ಟ್​ ಕಥೆಯ ಅಸಲಿ ಕಹಾನಿ ಸೆರೆಯಾಗಿದೆ.

ನನ್ನದೇನೂ ತಪ್ಪಿಲ್ಲ. ನಾನವನನ್ನ ನಾನವನಲ್ಲ ಎನ್ನುತ್ತಿದ್ದಾನೆ ಪೋಸ್ಟ್ ಮೆನ್. ಈತ ನೇರವಾಗಿ ಕೈ ತೋರಿಸಿದ್ದೇ ಪೊಲೀಸರತ್ತ. ಎಲ್ಲಾ ತಪ್ಪು ಪೊಲೀಸರೇ ಮಾಡಿದ್ದಾರೆ. ಅಡ್ರೆಸ್​ ಸರಿಯಾಗಿ ವೆರಿಫಿಕೇಶನ್ ಮಾಡದೇ ಅಪ್ರೂವ್ ಮಾಡಿದ್ದಾರೆ. ಆದರೆ ನಾನು ಪೋಸ್ಟ್ ಆಫೀಸ್​ಗೆ ಬಂದ ಪಾಸ್​ಪೋರ್ಟ್​ಗಳನ್ನ ಬೇರೆಯವರಿಗೆ ಕೊಟ್ಟದ್ದು ನಿಜ ಅಂತಾ ತಪ್ಪೊಪ್ಪಿಕೊಂಡುಬಿಟ್ಟ..! ಬರೀ ಡಾಕ್ಯೂಮೆಂಟ್ಸ್​ ಮಾತ್ರ ಇದ್ರೆ ಪಾಸ್​ಪೋರ್ಟ್​ ಆಗಲ್ಲ. ಬದಲಾಗಿ, ಪೊಲೀಸ್ ವೆರಿಫಿಕೇಶನ್ ತುಂಬಾ ಮುಖ್ಯವಾಗುತ್ತದೆ. ಒಬ್ಬೊಬ್ಬರ ಮೇಲೆ 20-30 ಪ್ರಕರಣಗಳಿವೆ. ಅಂಥಹ ಉತ್ತರ ಭಾರತದ ಗ್ಯಾಂಗ್​​ಸ್ಟರ್​ಗಳಿಗೆ ಅಷ್ಟು ಸಲೀಸಾಗಿ ಪೊಲೀಸ್ ವೆರಿಫಿಕೇಶನ್ ಕ್ಲಿಯರ್ ಮಾಡಿಕೊಟ್ಟದ್ದು ಯಾರು ಅನ್ನುವ ಪ್ರಶ್ನೆ ಕೂಡಾ ನಮ್ಮನ್ನ ಕಾಡುತ್ತದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more