ಆನ್‌ಲೈನ್ ಕ್ಲಾಸ್‌ಗಾಗಿ ಈಗ ಎಲ್ಲ ಮಕ್ಕಳ ಬಳಿ ಮೊಬೈಲ್ ಇರುತ್ತದೆ. ಪೋಷಕರು ಆಗಾಗ ಮಕ್ಕಳ ಚಲನವಲನಗಳನ್ನು ಗಮನಿಸೋದು ಒಳಿತು. 6 ನೇ ಕ್ಲಾಸ್ ಬಾಲಕಿಯೊಬ್ಬಳು ಆನ್‌ಲೈನ್ ಕ್ಲಾಸ್ ಜೊತೆಗೆ ಡ್ಯಾನ್ಸ್ ಮಾಡುತ್ತಿರುವ, ಹಾಡು ಹೇಳುತ್ತಿರುವ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಳು.
ಬೆಂಗಳೂರು (ಅ. 02): ಆನ್‌ಲೈನ್ ಕ್ಲಾಸ್‌ಗಾಗಿ ಈಗ ಎಲ್ಲ ಮಕ್ಕಳ ಬಳಿ ಮೊಬೈಲ್ ಇರುತ್ತದೆ. ಪೋಷಕರು ಆಗಾಗ ಮಕ್ಕಳ ಚಲನವಲನಗಳನ್ನು ಗಮನಿಸೋದು ಒಳಿತು. 6 ನೇ ಕ್ಲಾಸ್ ಬಾಲಕಿಯೊಬ್ಬಳು ಆನ್‌ಲೈನ್ ಕ್ಲಾಸ್ ಜೊತೆಗೆ ಡ್ಯಾನ್ಸ್ ಮಾಡುತ್ತಿರುವ, ಹಾಡು ಹೇಳುತ್ತಿರುವ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಳು.
ಈ ವಿಡಿಯೋವನ್ನು ಪುಂಡರು ಟ್ರೋಲ್ ಮಾಡಿದ್ದಾರೆ. 'ನಾವು ಹೇಳಿದಂತೆ ಕೇಳಬೇಕು. ಇಲ್ಲದಿದ್ರೆ ಗತಿ ಕಾಣಿಸ್ತೀವಿ' ಎಂದು ಮನೆ ಬಳಿ ಬಂದು ಬ್ಲಾಕ್‌ಮೇಲ್ ಮಾಡಿದ್ದಾರೆ. ಬಾಲಕಿ ವಿಷಯವನ್ನು ತಂದೆಗೆ ತಿಳಿಸಿದ್ದಾಳೆ. ಆರೋಪಿಯನ್ನು ಅರೆಸ್ಟ್ ಮಾಡಿದ್ದು, ಅವರ ಪೋಷಕರ ಮನವಿ ಮೇರೆಗೆ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಲಾಗಿದೆ.