Mar 21, 2022, 5:27 PM IST
ಬೆಂಗಳೂರು (ಮಾ. 21): ಹೆಬ್ಬಾಳ ಫ್ಲೈ ಓವರ್ ಮೇಲೆ ಸರಣಿ ಅಪಘಾತವಾಗುತ್ತದೆ. ರಸ್ತೆ ದಾಟುತ್ತಿದ್ದವರ ಮೇಲೆ ಬಿಬಿಎಂಪಿ ಕಸದ ಲಾರಿ ನುಗ್ಗಿದೆ. ಮಹಿಳೆ, ಬಾಲಕಿ ಸೇರಿ ಮೂವರು ರಸ್ತೆ ದಾಟುತ್ತಿದ್ದರು. ರಸ್ತೆ ದಾಟುತ್ತಿದ್ದರಿಂದ ಬೈಕ್, ಕಾರ್ ನಿಲ್ಲಿಸಿದ್ದರು ಸವಾರರು. ಹಿಂದಿನಿಂದ ವೇಗವಾಗಿ ಬಂದ ಲಾರಿ, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರನಿಗೆ ಗಾಯಗಳಾಗಿದ್ದು, ಬಾಲಕಿಯೋರ್ವಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸ್ಟೆಲ್ಲಾ ಮೇರಿಸ್ ಸ್ಕೂಲ್‌ನಲ್ಲಿ 9 ನೇ ತರಗತಿ ಓದುತ್ತಿದ್ದ ಬಾಲಕಿ ಅಕ್ಷಯಾ ಮೃತ ದುರ್ದೈವಿ.
Hebbal Flyover: ರಸ್ತೆ ದಾಟುತ್ತಿದ್ದ ಬಾಲಕಿಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ, ಬಾಲಕಿ ಸಾವು
ಬಿಬಿಎಂಪಿ ನಿರ್ಲಕ್ಷ್ಯದ ವಿರುದ್ಧ ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಡರ್‌ಪಾಸ್‌ನಲ್ಲಿ ನೀರು ತುಂಬಿದ್ದರಿಂದ ರಸ್ತೆ ದಾಟಲಾಗದೇ, ಫ್ಲೈ ಓವರ್ ಮೇಲೆ ದಾಟಲು ಬರುತ್ತಾರೆ. ಆಗ ಯಮ ಸ್ವರೂಪಿಯಾಗಿ ಬಂದ ಲಾರಿ ಡಿಕ್ಕಿ ಹೊಡೆದು, ಬಾಲಕಿ ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್, ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.