Dec 23, 2022, 4:48 PM IST
ಬೆಂಗಳೂರಿನ ಕೊರಮಂಗಲದ ಬಂಗಲೆಯೊಂದರಲ್ಲಿ ಡಬಲ್ ಮರ್ಡರ್ ಆಗಿತ್ತು. ಆ ಕೊಲೆಗಳನ್ನು ಆ ಮನೆಯಲ್ಲಿ ಕೆಲಸ ಮಾಡ್ತಿದ್ದವನೇ ಮಾಡಿರಬಹುದು ಅನ್ನೋ ಶಂಕೆ ಇದೆ ಅಂತ ಮೊನ್ನೆಯ ಎಪಿಸೋಡ್'ನಲ್ಲಿ ಹೇಳಿದ್ವಿ. ಆದ್ರೆ ಇವತ್ತು ಆ ಮರ್ಡರರ್ ತಗ್ಲಾಕಿಕೊಂಡಿದ್ದಾನೆ. ಅವನ ಜೊತೆ ಇನ್ನಿಬ್ಬರೂ ಸಹ ಅಂದರ್ ಆಗಿದ್ದಾರೆ. ಆದ್ರೆ ಇಷ್ಟೇ ಅಗಿದ್ರೆ ನಾವು ಇವತ್ತು ಮತ್ತೇ ಅದೇ ಸ್ಟೋರಿಯನ್ನ ಹೇಳ್ತಿರಲಿಲ್ಲ. ಆದ್ರೆ ಆ ಕೊಲೆಗಾರರು ತಗ್ಲಾಕೊಂಡ ರೀತಿ ಇದ್ಯಲ್ಲ, ನಿಜಕ್ಕೂ ರೋಚಕ. ಕೊಲೆ ಮಾಡಿ ಪೊಲೀಸರಿಂದ ಬಹು ದೂರ ಹೋಗಿದ್ದ ಹಂತಕರು ಒಂದು ಸ್ಕಾಚ್ ಬಾಟಲ್ಗಾಗಿ ಮತ್ತೆ ವಾಪಸ್ ಆಗಿ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾರೆ. ಹೀಗೆ ಬೆಂಗಳೂರಿನಲ್ಲಿ ಡಬಲ್ ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದ ಹಂತಕರ ಹೆಡೆಮುರಿ ಕಟ್ಟಿದ ರೋಚಕ ಕಥೆಯ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.