
ಬೆಂಗಳೂರಿನ ಟೆಕ್ಕಿ ಆತ್ಮಹತ್ಯೆ ಪ್ರಕರಣವು ದೇಶಾದ್ಯಂತ ಸದ್ದು ಮಾಡುತ್ತಿದ್ದು, ಸುಪ್ರೀಂ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದೆ. ಪ್ರಕರಣದ ತನಿಖೆ ಎಲ್ಲಿಗೆ ಬಂದು ತಲುಪಿದೆ ಮತ್ತು ಅತುಲ್ ಪತ್ನಿಯ ಪ್ರತಿಕ್ರಿಯೆ ಏನು ಎಂಬುದು ಮುಖ್ಯ ಪ್ರಶ್ನೆ.
ಬೆಂಗಳೂರು (ಡಿ.13): ಟೆಕ್ಕಿ ಆತ್ಮಹತ್ಯೆಯ ಕೇಸ್ ಈಗ ದೇಶದೆಲ್ಲೆಡೆ ಸದ್ದು ಮಾಡ್ತಿದೆ. ಒಬ್ಬೊಬ್ಬರದ್ದು ಒಂದೊಂದು ಅನಿಸಿಕೆ, ಹೇಳಿಕೆ. ಆದರೆ, ಪ್ರಾಣ ಕಳೆದುಕೊಂಡ ಆ ಅತುಲ್ ಮಾತ್ರ ಇವತ್ತು ಒಂದು ಸ್ಟ್ರಾಂಗ್ ಮೆಸೆಜ್ ಕೊಟ್ಟು ಮಸಣ ಸೇರಿದ್ದಾನೆ.
ಇನ್ನೂ ಇದೇ ಸೂಸೈಡ್ ಕೇಸ್ ಸುದ್ದಿ ಸುಪ್ರೀಂ ಕೋರ್ಟ್‌ವರೆಗೂ ಮುಟ್ಟಿ ನಿನ್ನೆಯಷ್ಟೇ ಕಳವಳ ವ್ಯಕ್ತಪಡಿಸಿತ್ತು. ಇವತ್ತು ಅದೇ ಸುಪ್ರೀಂ ಮಹಿಳಾ ಕಾನೂನುಗಳ ಬಗ್ಗೆ ಒಂದಷ್ಟು ಮಾರ್ಗಸೂಚಿಗಳನ್ನ ಕೊಟ್ಟಿದೆ.
Justice is Due ಎಂದು ಬರೆದು ಸಾವಿಗೆ ಶರಣಾದ ಯುವಕನ 12 ಕೊನೆಯ ಆಸೆ, ಈಡೇರಿಸುತ್ತಾ ನಮ್ಮ ಸಮಾಜ?
ಇಷ್ಟೆಲ್ಲಾ ಇರುವಾಗಲೇ ಪೊಲೀಸರು ಕೇಸ್‌ನ ತನಿಖೆ ನಡೆಸುತ್ತಿದ್ದು. ಹೆಂಡತಿ ಊರಿಗೆ ಹೋಗಿ ತಲುಪಿದ್ದಾರೆ. ಹಾಗಾದರೆ, ಈ ಅತುಲ್ ಸೂಸೈಡ್ ಕೇಸ್ ತನಿಖೆ ಎಲ್ಲಿವರೆಗೆ ಬಂದಿದೆ.. ಅತುಲ್ ಹೆಂಡತಿಯ ರಿಯಾಕ್ಷನ್ ಏನು ಅನ್ನೋದು ಮುಂದಿರುವ ಪ್ರಶ್ನೆ.